Breaking News

ಕರೀಷ್ಮಾ ಕಪೂರ್​ ಜೊತೆ ನ್ಯೂಯಾರ್ಕ್​ ಸುತ್ತಾಡಿದ ರಣ್​ಬೀರ್ ​- ಆಲಿಯಾ ಜೋಡಿ

Spread the love

ಆಲಿಯಾ ಭಟ್​ ಮತ್ತು ರಣ್​ಬೀರ್​​ ಕಪೂರ್​ ದಂಪತಿ ನಟಿ ಕರೀಷ್ಮಾ ಕಪೂರ್​ ಜೊತೆ ನ್ಯೂಯಾರ್ಕ್​ನಲ್ಲಿ ಸುತ್ತಾಡಿರುವ ಫೋಟೋಗಳು ವೈರಲ್​ ಆಗುತ್ತಿದೆ.

ಬಾಲಿವುಡ್​ ಸುಂದರ ಜೋಡಿ ಆಲಿಯಾ ಭಟ್​ ಮತ್ತು ರಣ್​ಬೀರ್​​ ಕಪೂರ್​ ಪ್ರಸ್ತುತ ಅಮೆರಿಕದಲ್ಲಿದ್ದಾರೆ.

ಸಿನಿಮಾದಿಂದ ಕೊಂಚ ಬ್ರೇಕ್​ ತೆಗೆದುಕೊಂಡ ಸೆಲೆಬ್ರಿಟಿ ಕಪಲ್​ ರಜಾ ದಿನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಆದರೆ, ಇವರಿಬ್ಬರು ತಮ್ಮ ಪ್ರವಾಸದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಆದರೂ ತಾರಾ ಜೋಡಿಯ ಅಮೆರಿಕದ​ ಟ್ರಿಪ್​ನ ಪೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

 

 

ಮಂಗಳವಾರ, ಆಲಿಯಾ ಭಟ್​ ಮತ್ತು ರಣ್​ಬೀರ್​​ ಕಪೂರ್​ ಅವರು ಸೋದರ ಸಂಬಂಧಿ ಆಗಿರುವ ನಟಿ ಕರೀಷ್ಮಾ ಕಪೂರ್​ ಜೊತೆ ನ್ಯೂಯಾರ್ಕ್​ನಲ್ಲಿ ಸುತ್ತಾಡಿರುವ ಫೋಟೋಗಳು ವೈರಲ್​ ಆಗಿವೆ. ಈ ಸುಂದರ ಫೋಟೋಗಳನ್ನು ಕರೀಷ್ಮಾ ಕಪೂರ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೂರು ಫೋಟೋಗಳನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಆಲಿಯಾ ಮತ್ತು ರಣ್​ಬೀರ್​​ ಮಧ್ಯೆ ಕರೀಷ್ಮಾ ಕಪೂರ್​ ನಿಂತಿರುವುದನ್ನು ಕಾಣಬಹುದು. ರಣ್​ಬೀರ್​​ ಆಕೆಯ ತಲೆಯ ಮೇಲೆ ಚುಂಬಿಸುತ್ತಿದ್ದಾರೆ. ಆಲಿಯಾ ಪರಿಪೂರ್ಣ ಚಿತ್ರಕ್ಕಾಗಿ ಅವರಿಬ್ಬರನ್ನು ತಬ್ಬಿಕೊಂಡಿರುವುದನ್ನು ಕಾಣಬಹುದು.

 

 

 

ಪೋಸ್ಟ್​ ಹಂಚಿಕೊಂಡ ಕರೀಷ್ಮಾ, “ನ್ಯೂಯಾರ್ಕ್​ ನೈಟ್​ ಔಟ್​ #ಫ್ಯಾಮಿಲಿ” ಎಂದು ಕ್ಯಾಪ್ಶನ್​ ನೀಡಿದ್ದಾರೆ. ಫೋಟೋದಲ್ಲಿ ರಣ್​ಬೀರ್​ ಕಪ್ಪು ಜಾಕೆಟ್​ ಮತ್ತು ಬೀನಿ ಕ್ಯಾಪ್​ ಧರಿಸಿದ್ದರೆ, ಆಲಿಯಾ ಹಸಿರು ಬಣ್ಣದ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಇತ್ತೀಚೆಗಿನ ಕೇಶ ವಿನ್ಯಾಸವು ಹೊಸ ಸಿನಿಮಾದ ತಯಾರಿ ಎಂದು ನೆಟ್ಟಿಗರು ಭಾವಿಸಿದ್ದಾರೆ.

ಇದಕ್ಕೂ ಮೊದಲು, ನ್ಯೂಯಾರ್ಕ್​ನಲ್ಲಿ ರಣ್​ಬೀರ್​ ಮತ್ತು ಆಲಿಯಾ ಭಟ್​ ಅವರ ಡಿನ್ನರ್​ ಡೇಟ್​ ಫೋಟೋಗಳು ಮತ್ತು ವಿಡಿಯೋಗಳು ಇಂಟರ್ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿದ್ದವು. ಹಲವು ವೈರಲ್​ ಫೋಟೋಗಳು ಮತ್ತು ವಿಡಿಯೋದಲ್ಲಿ ದಂಪತಿ ರೆಸ್ಟೋರೆಂಟ್​ನಲ್ಲಿ ಜೊತೆಯಾಗಿ ಕಾಲ ಕಳೆಯುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದವು. ರಣ್​ಬೀರ್​ ಮತ್ತು ಆಲಿಯಾ ಕಳೆದ ತಿಂಗಳು ಅಮೆರಿಕ​ ಪ್ರವಾಸಕ್ಕೆ ತೆರಳುವ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ