ನೂರಾರು ಜನರು ಹೆಸ್ಕಾಂ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದರ ಮೂಲಕ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಅನಿಯಮಿತ ಲೊಡ ಶೆಡ್ಡಿಂಗ ಮಾಡುತ್ತಿರುವುದರಿಂದ ರೈತರ ಬೆಳೆಗಳಾದ ಶೇಂಗಾ, ಗೊವಿನಜೋಳ, ಸೋಯಾಬಿನ, ಉದ್ದು, ಹೆಸರು ಹಾಗೂ ಕಬ್ಬಿನ ಬೆಳೆಗಳು ನೀರಿಲ್ಲದೇ ಸಂಪೂರ್ಣ ಬತ್ತಿ ಹೋಗುತ್ತಿವೆ. ನಾವು ಲಕ್ಷಾಂತರ ರೂಪಾಯಿ ಬೆಳೆಗಳಿಗೆ ಖರ್ಚು ಮಾಡಿ ಕಂಗಾಲಾಗಿ ಕುಳಿತಿದ್ದು ವಿದ್ಯುತ್ ಸಮಸ್ಯೆಯನ್ನು ಸರಿಪಡಿಸದಿದ್ದರೆ ಎಲ್ಲ ರೈತರು ಉಗ್ರ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ, ಅನಿಲ ಹಂಜೆ, ಜಿನೇಶ್ವರ ಮಗದುಮ, ಜೈಕುಮಾರ ಖೇಮಲಾಪುರೆ, ಕಾಕಾ ತಡಾಕೆ, ಅಜೇತ ಖೇಮಲಾಪುರೆ, ಅಣ್ಣಾಸಾಹೇಬ ಮಗದುಮ್ಮ, ಸತ್ಯಪ್ಪಾ ಭೀಷ್ಠೆ, ಕೆದಾರಿ ಡೊಂಗರೆ, ಅರುಣ ಶಿಂಧೆ, ಬೈರು ಚೌಗಲೆ, ರಾಜಾಗೌಡ ಪಾಟೀಲ, ಅಜೇತ ಕಾಮಗೌಡಾ, ಅಪಾಸಾಹೇಬ ಕೋಗೆ, ಶ್ರೀಕಾಂತ ಮಂಗಸೂಳೆ ಸೇರಿ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾದರು.