Breaking News

ಗಂಡ ಆಟೋ ಡ್ರೈವರ್,​ ಹೆಂಡತಿ ಪಿಎಚ್​ಡಿ ಪದವೀಧರೆ; ಓದಿನ ಉತ್ಸಾಹಕ್ಕೆ ಕುಟುಂಬದ ಬೆಂಬಲ

Spread the love

ಹೈದರಾಬಾದ್​: ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಹೆಣ್ಣು ಒಬ್ಬಳು ಇರುತ್ತಾಳೆ ಎಂಬ ಮಾತಿಗೆ ತತ್ವಿರುದ್ಧದ ಘಟನೆಗಳು ನಮ್ಮ ಮುಂದೆ ನಡೆಯುತ್ತಿರುತ್ತದೆ.

ಅದೇ ರೀತಿಯ ಘಟನೆ ಇದೀಗ ಆಂಧ್ರದಲ್ಲಿ ನಡೆದಿದೆ. ಓದಿನ ಹಂಬಲದ ಹಸಿವನ್ನು ಹೊಂದಿದ್ದ ಹೆಂಡತಿ ಕನಸಿಗೆ ಆಟೋ ಡ್ರೈವರ್​​ ನಿರೇರದು ಪೋಷಿಸಿದ್ದಾರೆ. ಇದರ ಫಲವಾಗಿ ಇಂದು ಆಕೆ ಎಎನ್​ಯುನಲ್ಲಿ ಪಿಎಚ್​ಡಿ ಪೂರ್ಣಗೊಳಿಸುವಂತಾಗಿದೆ. ಇವರ ಹೆಸರು ಈಪುರಿ ಶೀಲ​. ತಮ್ಮ ಈ ಸಾಧನೆ ಮತ್ತು ಕುಟುಂಬದ ಪ್ರೋತ್ಸಾಹ ಕುರಿತು ಅವರು ಈಟಿವಿ ಭಾರತ್​ ಜೊತೆಗೆ ಮಾತನಾಡಿದ್ದಾರೆ.

ಏನಿದು ಘಟನೆ: ಗುಂಟೂರು ಜಿಲ್ಲೆಯ ತೆನಲಿ ಮಂಡಲ್​ನ ಪೆದರವೂರ್​ ಗ್ರಾಮದ ಈಪುರಿ ಶೀಲ​ 2003ರಲ್ಲಿ ಪದವಿ ಓದುತ್ತಿರುವಾಗಲೇ ಮದುವೆಯಾದರು. ವೃತ್ತಿಯಲ್ಲಿ ಆಟೋ ಡ್ರೈವರ್​ ಆಗಿದ್ದ ಕರುಣಾಕರ್​ ಎಂಬುವವರನ್ನು ವರಿಸಿದ ಅವರು ಓದನ್ನು ಅಲ್ಲಿಗೆ ಕೈ ಬಿಡಲಿಲ್ಲ. ಓದಿನ ಬಗ್ಗೆ ತನಗಿದ್ದ ಆಸಕ್ತಿಯನ್ನು ಗಮನಿಸಿದ ಕುಟುಂಬ ಸದಸ್ಯರು ಇಲ್ಲಿಯವರೆಗೆ ನನಗೆ ಪ್ರೋತ್ಸಾಹಿಸಿದರು ಎನ್ನುತ್ತಾರೆ ಆಕೆ. ಇನ್ನು ಓದಿನ ಆಸಕ್ತಿ ಜೊತೆ ಕುಟುಂಬ ಹೊಣೆಗಾರಿಕೆಯನ್ನು ಈಕೆ ಸಮರ್ಧವಾಗಿ ನಿರ್ವಹಿಸಿದ್ದಾರೆ. ಇವರಿಗೆ ಇಂಜಿನಿಯರಿಂಗ್​ ಓದುತ್ತಿರುವ ಮಗ ಇದ್ದು, ಇಂಟರ್ನ್​ ಮಾಡುತ್ತಿರುವ ಮಗಳಿದ್ದಾಳೆ. ಇವರ ಜೊತೆಗೆ ನನ್ನ ಓದು ಸಾಗುತ್ತಿದೆ ಎನ್ನುತ್ತಾರೆ ಶೀಲ.

ನನ್ನ ಓದಿಗೆ ನನ್ನ ಗಂಡ ಮತ್ತು ಮಕ್ಕಳು ಹೆಚ್ಚಿನ ಪ್ರೋತ್ಸಾಹ ನೀಡಿದರು. ಗಂಡ ನಮಗಾಗಿ ನಿರಂತರವಾಗಿ ದುಡಿದಿದ್ದಾರೆ. ನಾನು ಇಂದು ಏನೇ ಸಾಧನೆ ಮಾಡಿದರೂ ಅದಕ್ಕೆ ಕಾರಣ ನನ್ನ ಗಂಡ. ನಾನು ಪದವಿ ಬಳಿಕ ಕಾಲೇಜಿಗೆ ಹೋಗಿ ಎಂ.ಕಾಂ ಮಾಡಿದೆ. ಬಳಿಕ ದೂರ ಶಿಕ್ಷಣದಲ್ಲಿ ಎಂಎಚ್​ಆರ್​ಎಂ (ಪಿಜಿ)ಯನ್ನು ಮಾಡಿದೆ. 2016ರಲ್ಲಿ ಎಪಿ ಸೆಟ್​ ಅರ್ಹತೆ ಪಡೆದೆ. ಪಿಎಚ್​ಡಿ ಮಾಡಬೇಕು ಎಂಬ ನನ್ನ ಹಂಬಲ ಇದೀಗ ಪೂರ್ಣಗೊಂಡಿದೆ. ಡಾ ನಂಬೂರ್​ ಕಿಶೋರ್​ ಅವರ ಮಾರ್ಗದರ್ಶನದಲ್ಲಿ ಪಿಎಚ್​ಡಿ ಪಡೆದಿದ್ದೇನೆ. ನನ್ನ ಗುರಿ ಸರ್ಕಾರಿ ಶಿಕ್ಷಕಿಯಾಗಬೇಕು ಎಂಬುದು. ಪ್ರಸ್ತುತ ತೆನಾಲಿಯ ವಿಎಸ್​ಆರ್​ ಮತ್ತು ಎನ್​ವಿಆರ್​ ಕಾಲೇಜಿನಲ್ಲಿ ವಾಣಿಜ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ ಈಪುರಿ ಶೀಲ.

ಒಟ್ಟಿನಲ್ಲಿ ಸತತ ಪರಿಶ್ರಮ ಮತ್ತು ಕುಟುಂಬದ ಬೆಂಬಲ ಇದ್ದರೆ, ಹೆಣ್ಣು ಎಂತ ಸಾಧನೆ ಕೂಡ ಮಾಡಬಲ್ಲಳು ಎಂಬುದಕ್ಕೆ ಈಪುರಿ ಶೀಲ ಉದಾಹರಣೆಯಾಗಿದ್ದು, ಹಲವರಿಗೆ ಸ್ಪೂರ್ತಿಯಾಗಿದ್ದಾರೆ ಎಂದರೆ ತಪ್ಪಲ್ಲ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ