ಜಲಪಾತ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ವಿಭಿನ್ನ ಪಾತ್ರ ಮಾಡುತ್ತಿದ್ದು, ಈ ಚಿತ್ರದಲ್ಲಿ ಅವರ ಫಸ್ಟ್ ಲುಕ್ ರಿವೀಲ್ ಆಗಿದೆ.
ಖಳನಟ ಹಾಗೂ ಪೋಷಕ ಪಾತ್ರಗಳಲ್ಲಿ ಸ್ಯಾಂಡಲ್ವುಡ್ ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ಪ್ರಮೋದ್ ಶೆಟ್ಟಿ.
ಇದೀಗ ‘ಜಲಪಾತ’ ಎಂಬ ಸಿನಿಮಾದಲ್ಲಿ ಪ್ರಮೋದ್ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲುಕ್ ರಿವೀಲ್ ಆಗಿದೆ.
ನಿರ್ದೇಶಕ ರಮೇಶ್ ಬೇಗಾರ್ ರಚಿಸಿ, ನಿರ್ದೇಶಿಸಿರುವ ಜಲಪಾತ ಚಿತ್ರದಲ್ಲಿ ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ ಒಂದು ಪರಿಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಲುಕ್ನ ಪೋಸ್ಟರ್ ಅನ್ನು ಅವರ ಪತ್ನಿ ನಟಿ, ನಿರ್ಮಾಪಕಿ ಸುಪ್ರೀತಾ ಶೆಟ್ಟಿ ನಿನ್ನೆ (ಭಾನುವಾರ) ಬಿಡುಗಡೆ ಮಾಡಿದರು.
ಜಲಪಾತ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಲುಕ್ ರಿವೀಲ್ಬಳಿಕ ಮಾತನಾಡಿದ ಸುಪ್ರೀತಾ ಶೆಟ್ಟಿ ‘ಪ್ರಮೋದ್ ಮೊದಲಿನಿಂದಲೂ ವಿಭಿನ್ನ ಪಾತ್ರಗಳು ಮತ್ತು ಹೊಸಬರಿಗೆ ಪ್ರೋತ್ಸಾಹಿಸುವುದನ್ನು ಬಯಸುವವರು. ಅದರಂತೆ ರಮೇಶ್ ಬೇಗಾರ್ ಜತೆಗೆ ಪ್ರೀತಿಯಿಂದ 2ನೇ ಪ್ರಾಜೆಕ್ಟ್ ಮಾಡಿದ್ದಾರೆ. ರವೀಂದ್ರ ನಿರ್ಮಾಣದ ಜಲಪಾತ ಚಿತ್ರದ ಈ ಪೋಸ್ಟರ್ ಏನೋ ವಿಭಿನ್ನತೆ ಇದೆ ಎಂಬುದನ್ನು ಸೊಗಸಾಗಿ ತೋರಿಸಿದೆ. ಪ್ರಮೋದ್ ಅವರ ಲುಕ್ ಆ ಭರ್ಜರಿಯಾಗಿದ್ದು, ಆ ಪಾತ್ರ ಮತ್ತು ಸಿನಿಮಾ ನೋಡಲು ಕಾತುರಳಾಗಿದ್ದೇನೆ’ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ರಮೇಶ್ ಬೇಗಾರ್ ‘ಪರಿಸರ ಕಾಳಜಿ ಪ್ರಮೋದ್ ಶೆಟ್ಟಿ ಅವರ ವೈಯಕ್ತಿಕ ಆಸಕ್ತಿಯ ವಿಷಯ ಎಂದು ಅವರ ಚಟುವಟಿಕೆಯಿಂದ ಗಮನಿಸಿ ಈ ಪಾತ್ರಕ್ಕೆ ವಿನಂತಿಸಿದೆ. ಸಿನಿಮಾದ ಉದ್ದೇಶ ಅವರನ್ನು ಇಂಪ್ರೆಸ್ಸ್ ಮಾಡಿತು. ಹಾಗಾಗಿ ಈ ಪಾತ್ರ ಒಪ್ಪಿ ಅತ್ಯುತ್ತಮ ನಿರ್ವಹಣೆ ಮಾಡಿದ್ದಾರೆ’ ಎಂದರು.
ಜಲಪಾತ ಚಿತ್ರದ ಪೋಸ್ಟರ್ನಿರ್ಮಾಪಕ ರವೀಂದ್ರ ತುಂಬರಮನೆ ಮಾತಾಡಿ, ‘ಪರಿಸರ ರಕ್ಷಣೆ ಮತ್ತು ಅರಿವನ್ನು ನವಿರಾಗಿ ಹೇಳಲು ಹೊರಟ ನಮ್ಮ ತಂಡಕ್ಕೆ ಪ್ರಮೋದ್ ಶೆಟ್ಟಿ ಒತ್ತಾಸೆಯಾಗಿ ನಿಂತಿದ್ದಾರೆ. ಮಾತ್ರವಲ್ಲ ಚಿತ್ರದ ಮೌಲ್ಯ ಮತ್ತು ಅದ್ಧೂರಿತನವನ್ನು ಎತ್ತಿದ್ದಾರೆ. ಸಿನಿಮಾ ಜನರನ್ನು ಆಕರ್ಷಿಸುವಲ್ಲಿ ಪ್ರಮೋದ್ ಶೆಟ್ಟಿ ಅವರ ಈ ಪೋಸ್ಟರ್ ನಿರ್ಣಾಯಕವಾಗಿದೆ ಎಂದು ತಿಳಿಸಿದರು.