Breaking News

ಓರ್ವನ ಕೊಲೆಗೆ ನೂರು ಜನ ಬಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

Spread the love

ಮುಂಬೈ/ಪುಣೆ: ಓರ್ವನ ಕೊಲೆಗೆ ನೂರು ಜನ ಬಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ದುಷ್ಕರ್ಮಿಗಳು ಸಾಲು ಸಾಲು ಬೈಕುಗಳಲ್ಲಿ ಹೋಗುತ್ತಿರೋದನ್ನ ವೀಡಿಯೋದಲ್ಲಿ ಗಮನಿಸಬಹುದು. ಯುವಕನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು

ಮಹಾರಾಷ್ಟ್ರದ ಪುಣೆಯ ನೆಹರೂ ನಗರದಲ್ಲಿ ಶುಕ್ರವಾರ ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ. 35 ವರ್ಷದ ನೀಲೇಶ್ ಸುಭಾಷ್ ಜಾಧವ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸುಭಾಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಆಶೀಷ್ ಜಗಧನೆ (31), ಇರ್ಫಾನ್ ಶೇಖ್ (30), ಜೀತೇಶ್ ಮಂಜುಲೆ (28), ಜಾವೇದ್ ಔಟಿ (29), ಆಕಾಶ್ ಹಜಾರೆ (30) ಸೇರಿದಂತೆ ನೂರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಂದು ಬಿಡಿ, ಹೊಡೆದಾಕಿ: ಹಲ್ಲೆಗೊಳಗಾದ ನೀಲೇಶ್ ನೆಹರೂ ನಗರದಲ್ಲಿ ಕೆಲಸ ಮಾಡಿಕೊಂಡಿದ್ದನು. ಶುಕ್ರವಾರ ರಾತ್ರಿ 9.30ಕ್ಕೆ ಕಾರಿನಲ್ಲಿರಿಸಿದ್ದ ಲ್ಯಾಪ್‍ಟಾಪ್ ತೆಗೆದುಕೊಳ್ಳಲು ನೀಲೇಶ್ ಕಚೇರಿಯಿಂದ ಹೊರ ಬಂದ ವೇಳೆ ದಾಳಿ ನಡೆದಿದೆ. ಬೈಕು ಗಳಲ್ಲಿ ಬಂದ ನೂರು ಜನರ ಗ್ಯಾಂಗ್ ನೀಲೇಶ್ ನನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಮಚ್ಚು, ಲಾಂಗು, ದೊಣ್ಣೆ, ಕಲ್ಲು, ಇಟ್ಟಿಗೆ ಸೇರಿದಂತೆ ಮಾರಕಾಸ್ತ್ರಗಳನ್ನ ತಮ್ಮ ಜೊತೆಯಲ್ಲಿ ತಂದಿದ್ದರು. ಹಲ್ಲೆ ವೇಳೆ ಆರೋಪಿಗಳು, ಇವನನ್ನ ಕೊಂದು ಬಿಡಿ, ಹೊಡೆದಾಕಿ ಎಂದು ಜೋರು ಜೋರಾಗಿ ಕೂಗಿದ್ದಾರೆ ಎಂದು ಪಿಂಪ್ರಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

ಸ್ಥಳದಲ್ಲಿದ್ದ 10 ವಾಹನಗಳನ್ನು ಜಖಂಗೊಳಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯ ನೆಹರೂ ನಗರದಲ್ಲಿ ಶುಕ್ರವಾರ ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ. 35 ವರ್ಷದ ನೀಲೇಶ್ ಸುಭಾಷ್ ಜಾಧವ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸುಭಾಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಆಶೀಷ್ ಜಗಧನೆ (31), ಇರ್ಫಾನ್ ಶೇಖ್ (30), ಜೀತೇಶ್ ಮಂಜುಲೆ (28), ಜಾವೇದ್ ಔಟಿ (29), ಆಕಾಶ್ ಹಜಾರೆ (30) ಸೇರಿದಂತೆ ನೂರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Spread the love

About Laxminews 24x7

Check Also

ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!!

Spread the love ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!! ದೇಶದಲ್ಲಿನ ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ