ನಗರದಲ್ಲಿ ನೈತಿಕ ಪೊಲೀಸ್ ಗಿರಿ ಗೆ ಅವಕಾಶವಿಲ್ಲ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.
ನಗರದಲ್ಲಿ ಕ್ರಿಶ್ಚಿಯನ ಕಮೀಟಿಯಿಂದ ಆಯೋಜಿಸಿದ ಸತ್ಕಾರ್ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಆಸೀಫ್ ಸೇಠ್,ಮಾಧ್ಯಮದವರೊಂದಿಗೆ ಮಾತುನಾಡಿ ನಗರದಲ್ಲಿ ನಡೆದಿರುವ ನೈತಿಕ ಪೊಲೀಸ್ ಗಿರಿ ನಮಗೆ ಮಾಹಿತಿಯಿಲ್ಲ , ನೈತಿಕ ಪೊಲೀಸ್ ಗಿರಿಗೆ ಜಿಲ್ಲೆಯಲ್ಲಿ ಅವಕಾಶವಿಲ್ಲ, ಯಾರೇ ಭಾಗಿಯಾಗಿದ್ದರು ಕಠಿಣ ಕ್ರಮ ಕೈಗೊಳ್ಳತ್ತೇವೆ ಅಂತಾ ಹೇಳಿದ್ದರು.
ಇನ್ನೂ ಲೋಕಸಭಾ ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಚುನಾವಣೆ ತಯಾರಿ ಮಾಡುತ್ತೇವೆ , ಪಕ್ಷದಲ್ಲಿ ತುಂಬಾನೆ ಆಕಾಂಕ್ಷಿಗಳು ಇದ್ದಾರೆ ,ಪಕ್ಷ ಯಾರಿಗೆ ಟಿಕೆಟ್ ನೀಡಿದರು ಅವರ ಪರವಾಗಿ ಕೆಲಸ ಮಾಡುತ್ತೇವೆ, ಪ್ರಕಾಶ್ ಹುಕ್ಕೇರಿ ನಮ್ಮ ಪಕ್ಷದ ಹಿರಿಯ ನಾಯಕರಿದ್ದಾರೆ ಹೈಕಮಾಂಡ್ ಅವರಿಗೆ ಕೊಡುತ್ತೇ ಎಂಬುದನ್ನು ಕಾದು ನೋಡಬೇಕು ,
ಮಾಜಿ ಶಾಸಕ ಪಿರೋಜ್ ಸೇಠ್ ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಲ್ಲ ಅವರು ಆಕಾಂಕ್ಷಿಯಲ್ಲ , ರಮೇಶ್ ಕತ್ತಿ ಕಾಂಗ್ರೆಸ್ ಸೇರುವುದರ ಬಗ್ಗೆ ಗೊತ್ತಿಲ್ಲ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ , ಈ ಹಿಂದೆ ಕಾಂಗ್ರೆಸ್ ಬಿಟ್ಟು ಹೋದವರು ನಮ್ಮ ಪಕ್ಷಕ್ಕೆ ಬಂದ್ರೆ ಸ್ವಾಗತ ಮಾಡುತ್ತೇವೆ ಎಂದರು
Laxmi News 24×7