ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತರಾಗಿ ರೇಷ್ಮಾ ತಾಳಿಕೋಟಿ ಅವರನ್ನು ನೇಮಕಮಾಡಲಾಗಿದೆ
ಬೆಳಗಾವಿ ಮಲಪ್ರಭಾ ಹಾಗೂ ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ)ದ ಉಪ ಆಡಳಿತಾಧಿಕಾರಿಯಾಗಿದ್ದ ರೇಷ್ಮಾ ತಾಳಿಕೋಟಿ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತರನ್ನಾಗಿ ಸರ್ಕಾರ ನೇಮಕಗೊಳಿಸಿ ಆದೇಶ ಮಾಡಿದೆ
ಈ ಹಿಂದೆ ರೇಷ್ಮಾ ತಾಳಿಕೋಟಿ ಅವರು ಭೂಸ್ವಾಧೀನ ಇಲಾಖೆ ಹಾಗೂ ಖಾನಾಪೂರದ ತಹಶೀಲ್ದಾರ್ ರಾಗಿ ಸೇವೆ ಸಲ್ಲಿಸಿದ್ದಾರೆ ಸದ್ಯಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾಗಿ ನೇಮಕಗೊಂಡಿದ್ದಾರೆ.