Breaking News

NIA: ಬೆಳ್ಳಂದೂರಿನಲ್ಲಿ ಪತ್ತೆಯಾಗಿರುವುದು 43 ಅಕ್ರಮ ಬಾಂಗ್ಲಾ ವಲಸಿಗರು,

Spread the love

ಬೆಂಗಳೂರು, ಆಗಸ್ಟ್​ 11: ಇತ್ತೀಚೆಗೆ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು (illegal Bangladeshi immigrants) ಪತ್ತೆಯಾಗಿದ್ದು, ಆ ಪ್ರಕರಣದ ಪರಿಶೀಲನೆ ವೇಳೆ ಪತ್ತೆಯಾಗಿದ್ದು ಮೂವರಲ್ಲ 43 ಬಾಂಗ್ಲಾ ವಲಸಿಗರು ಎಂದು ತಿಳಿದುಬಂದಿದೆ.

ಬೆಳ್ಳಂದೂರಿನಲ್ಲಿ ಒಟ್ಟು 43 ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿರುವ ಬಗ್ಗೆ ಎನ್​ಐಎ(National Investigation Agency -NIA) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಕೇವಲ ಮೂವರು ಬಾಂಗ್ಲಾದೇಶಿ ಅಕ್ರಮ ವಲಸಿಗರು ಇದ್ದಾರೆ ಎಂಬ ಮಾಹಿತಿ ಇತ್ತು.

ಬಾಂಗ್ಲಾ ಪ್ರಜೆಗಳು ದೇಶದಲ್ಲಿ 2011ರಿಂದ ಅಕ್ರಮವಾಗಿ ನೆಲೆಸಿರುವ ಮಾಹಿತಿಯಿದೆ. ಇವರೆಲ್ಲ ಬ್ರೋಕರ್​​ ಒಬ್ಬನಿಗೆ ಹಣ ನೀಡಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಮಾಹಿತಿಯಿದೆ. ತಲಾ 20 ಸಾವಿರ ರೂ ಹಣ ನೀಡಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.

ಈ ಬಾಂಗ್ಲಾದೇಶಿಯರು ಭಾರತದ ಆಧಾರ್ ಸೇರಿದಂತೆ ಹಲವು ಐಡಿ ಕಾರ್ಡ್​ ಮಾಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಬೆಳ್ಳಂದೂರು ಪೊಲೀಸ್​ ಠಾಣೆಯಲ್ಲಿ (Bellandur, Bangalore) ಪ್ರಕರಣ ದಾಖಲಾಗಿದೆ. ಎನ್‌ಐಎ ಅಧಿಕಾರಿಗಳ ದೂರಿನ ಅನ್ವಯ ಫಾರಿನರ್ ಆಕ್ಟ್​, ಪಾಸ್‌ಪೋರ್ಟ್ ಆಕ್ಟ್ ಅಡಿ ಕೇಸ್ ದಾಖಲಾಗಿದೆ.

ಬಿಟ್ ಕಾಯಿನ್ ಪ್ರಕರಣ -ಎಸ್‌ಐಟಿ ಯಿಂದ ತನಿಖೆ ಚುರುಕು

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣವನ್ನು (Bitcoin case) ಎಸ್‌ಐಟಿ (SIT) ತನಿಖೆಗೆ ಒಳಪಡಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ತಾಜಾ ಆಗಿ ಹಿಂದಿನ ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಎಸ್ ಐ ಟಿ ಡಿವೈ ಎಸ್ ಪಿ ಕೆ ರವಿಶಂಕರ್ ಅವರು ಬೆಂಗಳೂರು (Bengaluru) ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ. 2 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ , ಹಾಗೂ ಆಯಪ್ ಮ್ಯಾಕ್ ಬುಕ್ ನಲ್ಲಿ ಮೂಲ ಫೈಲ್ ಗಳನ್ನ ಅಳಿಸಲಾಗಿದೆ. ಅದೇ ಸ್ಥಳದಲ್ಲಿ ಹೆಚ್ಚುವರಿಯಾಗಿ ಫೈಲ್ ಗಳನ್ನ ಸೃಷ್ಟಿಸಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ