ವಿಜಯಪುರ: ಭೀಮಾ ತೀರದ ಹಂತಕ ಮಹಾದೇವ್ ಸಾಹುಕಾರ್ ಮೇಲೆ ನಡೆದ ಫೈರಿಂಗ್ ನಲ್ಲಿ ಬಾಬುರಾಯ ಎಂಬಾತ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.
ಇಂದು ಮಧ್ಯಾನ್ಹದ ವೇಳೆ ಚಡಚಣ ತಾಲೂಕಿನ ಕೊರೂರ್ ಬಳಿ ಮಹಾದೇವ್ ಕಾರಿಗೆ ಟಿಪ್ಪರ್ ನಿಂದ ಡಿಕ್ಕಿ ಹೊಡೆಸಿದ ದುಷ್ಕರ್ಮಿಗಳು 3-4 ಸುತ್ತು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಮಹಾದೇವ್ ಸಾಹುಕಾರ್ ಜತೆಗಿದ್ದ ಬಾಬುರಾಯ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.
ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡಿರುವ ಮಹಾದೇವ್ ಸೇರಿ ಮೂವರನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಟಿಪ್ಪರ್ ಮತ್ತು ಪಲ್ಸರ್ ಬೈಕ್ ಮೇಲೆ ಬಂದು ಅಪರಿಚಿತರು ದಾಳಿ ನಡೆಸಿರುವ ಶಂಕೆ ಇದೆ. ಘಟನೆ ಬಳಿಕ ಆರೋಪಿಗಳು ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.