Breaking News

ಚಂದ್ರಯಾನ-3: ಲ್ಯಾಂಡರ್‌ನ ವೇಗ ತಗ್ಗಿಸುವ ಅಂತಿಮ ಹಂತದ ಪ್ರಕ್ರಿಯೆ ಯಶಸ್ವಿ

Spread the love

Chandrayaan-3: ‘ಚಂದ್ರಯಾನ-3’ ಯೋಜನೆಯ ಲ್ಯಾಂಡರ್‌ ಘಟಕವನ್ನು ಆಗಸ್ಟ್‌ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ (South Pole) ಇಸ್ರೋ ಸಾಫ್ಟ್‌ ಲ್ಯಾಂಡಿಂಗ್ ಮಾಡಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.

ಈ ನಿಟ್ಟಿನಲ್ಲಿ ಡೀಬೂಸ್ಟ್‌ (ಲ್ಯಾಂಡರ್‌ನ ವೇಗ ತಗ್ಗಿಸುವುದು) ಪ್ರಕ್ರಿಯೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸುತ್ತಿದೆ.

ಬೆಂಗಳೂರು/ನವದೆಹಲಿ : ಚಂದ್ರಯಾನ-3 ಗಗನನೌಕೆಯು ಭೂಮಿಯ ಏಕೈಕ ಉಪಗ್ರಹ ಚಂದ್ರನಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂದು ಮುಂಜಾನೆ ಚಂದ್ರಯಾನ 3ರ ಎರಡನೇ ಮತ್ತು ಅಂತಿಮ ಹಂತದ ಡೀಬೂಸ್ಟ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಲ್ಯಾಂಡರ್‌ (ವಿಕ್ರಮ್) ವೇಗವನ್ನು ಕಡಿಮೆ ಮಾಡಿ, ಲ್ಯಾಂಡರ್‌ ಘಟಕವನ್ನು ಚಂದ್ರನ ಮೇಲ್ಮೈಗೆ ಬಹಳ ಹತ್ತಿರವಿರುವ ಕಕ್ಷೆ ಸೇರುವಂತೆ ಮಾಡಲಾಗಿದೆ.

 

 

ಡೀಬೂಸ್ಟಿಂಗ್ ಎಂದರೇನು?: ಡೀಬೂಸ್ಟಿಂಗ್ ಎನ್ನುವುದು ಚಂದ್ರಯಾನವನ್ನು ಕಕ್ಷೆಯಲ್ಲಿ ಇರಿಸಲು ವೇಗ ನಿಧಾನಗೊಳಿಸುವ ಮಹತ್ವದ ಪ್ರಕ್ರಿಯೆ. ಪ್ರಸ್ತುತ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ಗಳನ್ನು ಒಳಗೊಂಡಿರುವ ಮಾಡ್ಯುಲ್ 25 ಕಿಲೋ ವೀಟರ್​ x 134 ಕಿಲೋ ಮೀಟರ್​ ಕಕ್ಷೆಯಲ್ಲಿದೆ. ಲ್ಯಾಂಡರ್‌ ಘಟಕವನ್ನು ಆಗಸ್ಟ್‌ 23ರಂದು ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ (ಸಾಫ್ಟ್‌ ಲ್ಯಾಂಡಿಂಗ್‌) ಇಳಿಸಲಾಗುತ್ತದೆ.ISRO ಮಾಹಿತಿ​: ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’​​ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಎರಡನೇ ಮತ್ತು ಅಂತಿಮ ಡೀಬೂಸ್ಟಿಂಗ್ (ನಿಧಾನಗೊಳಿಸುವಿಕೆ) ಕಾರ್ಯಾಚರಣೆಯು LM ಕಕ್ಷೆಯನ್ನು 25 km x 134 kmಗೆ ಯಶಸ್ವಿಯಾಗಿ ಕಡಿಮೆ ಮಾಡಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ. ಹೀಗಾಗಿ, ಗೊತ್ತುಪಡಿಸಿದ ಲ್ಯಾಂಡಿಂಗ್ ಸೈಟ್‌ನಲ್ಲಿ ಸೂರ್ಯೋದಯಕ್ಕಾಗಿ ಕಾಯಲಾಗುತ್ತಿದೆ. ಸಾಫ್ಟ್‌ ಲ್ಯಾಂಡಿಂಗ್‌ ಪ್ರಕ್ರಿಯೆ ಆಗಸ್ಟ್ 23, 2023ರಂದು ನಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ