Breaking News

ಸಿದ್ದರಾಮಯ್ಯ & ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ:ಸದಾನಂದಗೌಡ

Spread the love

ಬೆಂಗಳೂರು : ಆಪರೇಷನ್ ಹಸ್ತ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಸಂಸದ ಡಿವಿ ಸದಾನಂದಗೌಡ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ ಎಂದು ವಾಗ್ದಾಳಿ ನಡೆಸಿದರು. ಮಲ್ಲೇಶ್ವರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮ್ಮಲ್ಲಿರುವ ಗೊಂದಲ‌ ಮುಚ್ಚಿಕೊಳ್ಳಲು ಹಾರಿಕೆ ಸುದ್ದಿ ಹರಡ್ತಿದಾರೆ. ಮೂರೇ ತಿಂಗಳಲ್ಲಿ ಕಾಂಗ್ರೆಸ್​ನವರ ಕಪಟ ನಾಟಕ ಜನರಿಗೆ ಗೊತ್ತಾಗಿದೆ. ಅವರು ಭರವಸೆ ಈಡೇರಿಸಿಲ್ಲ. ಅವರ ಶಾಸಕರನ್ನು ಸಮಾಧಾನ ಮಾಡಲು ಆಗಿಲ್ಲ ಎಂದರು.

ನಮ್ಮವರು ಯಾರೂ ಕಾಂಗ್ರೆಸ್​ಗೆ ಹೋಗಲ್ಲ. ಸಿಎಂ, ಡಿಸಿಎಂ ತನ್ನ ಕ್ಷೇತ್ರಕ್ಕೆ ಬಂದಾಗ ಶಾಸಕರು ಹೋದರೆ ತಪ್ಪಾ?. ಏನು ನಾವು ತಂಬೂರಿ ಹಿಡಿದುಕೊಂಡವರ ಹಿಂದೆ ಹೋಗುವ ಇಲಿಗಳು ಅಂತಾ ಕಾಂಗ್ರೆಸ್​ನವರು ತಿಳಿದಿದ್ದಾರಾ?. ಭೈರತಿ ಬಸವರಾಜ, ಎಸ್​ಟಿ ಸೋಮಶೇಖರ್, ಗೋಪಾಲಯ್ಯ ಅವರ ಜೊತೆ ಮಾತನಾಡಿದ್ದೇನೆ. ಕಾಂಗ್ರೆಸ್​ಗೆ ಹೋಗುವ ಬದಲು ನೇಣು ಹಾಕಿಕೊಂಡು ಸತ್ತು ಹೋಗುವುದು ಒಳ್ಳೆಯದು ಎನ್ನುವ ರೀತಿಯಲ್ಲಿ ಗೋಪಾಲಯ್ಯ ಹೇಳಿದ್ದಾರೆ ಎಂದರು. ಇನ್ನು ಎಸ್​ಟಿ ಸೋಮಶೇಖರ್ ಕೂಡಾ ಕಾಂಗ್ರೆಸ್ ಸೇರ್ತೀನಿ ಅಂತ ಹೇಳಿಲ್ಲ ಅಂದಿದ್ದಾರೆ. ಸೋಮಶೇಖರ್ ಜೊತೆ ಮೊನ್ನೆ ಮಾತನಾಡಿದ್ದೇನೆ. ಅವರ ಕ್ಷೇತ್ರದಲ್ಲಿ ಕೆಲ ಆಂತರಿಕ ಸಮಸ್ಯೆ ಇದೆ. ಅದನ್ನು ಬಗೆಹರಿಸುವ ಕೆಲಸ ಮಾಡ್ತೇವೆ. ಸೋಮಶೇಖರ್ ಕಾಂಗ್ರೆಸ್​ಗೆ ಹೋಗಲ್ಲ ಅನ್ನೋದು ನಮ್ಮ ನಂಬಿಕೆ ಎಂದರು.

ಇನ್ನು ಆ ಪ್ರಕ್ರಿಯೆ ಶುರುವಾಗಿಲ್ಲ: ಮುಂದಿನ ಲೋಕಸಭೆ ಚುನಾವಣೆ ಬಗ್ಗೆ ಯಾರಿಗೆ ಟಿಕೆಟ್ ಅಂತ ಇನ್ನೂ ನಮ್ಮಲ್ಲಿ ಪ್ರಕ್ರಿಯೆ ಶುರುವಾಗಿಲ್ಲ. ಆದರೆ ಇದರ ಬಗ್ಗೆ ಆಗಲೇ ಮಾಧ್ಯಮಗಳಲ್ಲಿ ಏನೇನೋ ಬರ್ತಿದೆ. ನಮ್ಮ ವರಿಷ್ಠರು ಪಂಚ ರಾಜ್ಯಗಳ‌ ಚುನಾವಣೆ ತಯಾರಿಯಲ್ಲಿದ್ದಾರೆ. ಇದಾದ ನಂತರ ಲೋಕಸಭೆ ಚುನಾವಣೆ ಕಡೆ ಗಮನ ಕೊಡ್ತಾರೆ ಎಂದು ಹೇಳಿದರು. ಸೋಷಿಯಲ್ ಮೀಡಿಯಾದಲ್ಲಿ ಏನೋ ಬರೆದುಕೊಂಡಿದ್ದಾರೆ ಅಂತ ನಮ್ಮವರಿಗೆ ಬೆದರಿಕೆ ಹಾಕ್ತಿದ್ದಾರೆ. ಅರೆಸ್ಟ್ ಮಾಡಿಸ್ತಿದಾರೆ ಎಂದು ದೂರಿದರು. ಕರ್ನಾಟಕದಲ್ಲಿ ಬಿಜೆಪಿ ಸೋತಿದೆ ಅಂತಾ ಮಲಗಿಬಿಡ್ತಾರೆ ಎಂದು ಅಂದುಕೊಂಡಿದ್ದರು. ಇನ್ನು ನಮ್ಮದೇ ರಾಜ್ಯ ಎಂಬ ಕಾಂಗ್ರೆಸ್​ನವರ ಅಹಂಕಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ತೀರ್ಮಾನಿಸಿದ್ದೇವೆ. ಕಾರ್ಯಕರ್ತರಿಗೆ ಆತ್ಮಸ್ಥೈರ್ಯದ ಕೊರತೆ ಎಲ್ಲೂ ಕಾಣುತ್ತಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ