ಅಮರಾವತಿ (ಆಂಧ್ರ ಪ್ರದೇಶ): ಮಾರ್ಗದರ್ಶಿ ಚಿಟ್ ಗ್ರೂಪ್ಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವ ಕುರಿತು ಚಿಟ್ ರಿಜಿಸ್ಟ್ರಾರ್ ಹೊರಡಿಸಿದ್ದ ಸಾರ್ವಜನಿಕ ನೊಟೀಸ್ಗೆ ಆಂಧ್ರ ಪ್ರದೇಶ ಹೈಕೋರ್ಟ್ ಇಂದು ತಡೆ ನೀಡಿತು.
ಸಾರ್ವಜನಿಕ ನೊಟೀಸ್ ಆಧಾರದ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೆ ಹೈಕೋರ್ಟ್ ತಡೆ ಕೊಟ್ಟಿದೆ. ಚಂದಾದಾರರು ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಕುರಿತಂತೆ ಮಧ್ಯಂತರ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅರ್ಜಿಗಳನ್ನು ಜೊತೆಯಾಗಿಯೇ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿತು.
ಚಂದಾದಾರರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿ ಆಂಧ್ರಪ್ರದೇಶ ಸರ್ಕಾರದ ವೆಬ್ಸೈಟ್ನಲ್ಲಿ ಚಿಟ್ ರಿಜಿಸ್ಟ್ರಾರ್ ಸಾರ್ವಜನಿಕ ನೊಟೀಸ್ ಪ್ರಕಟಿಸಿದ್ದರು. ಪ್ರಶ್ನಿಸಿ ಮಾರ್ಗದರ್ಶಿ ಚಿಟ್ಫಂಡ್ ಕಂಪನಿಯು ಆಂಧ್ರಪ್ರದೇಶದ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯವು ಮಾರ್ಗದರ್ಶಿ ಚಿಟ್ಫಂಡ್ ಗ್ರೂಪ್ ಹಾಗೂ ಸರ್ಕಾರದ ಪರವಾದ ಎರಡೂ ಕಡೆಗಳ ವಾದಗಳನ್ನು ಆಲಿಸಿ ತಡೆಯಾಜ್ಞೆ ನೀಡಿದೆ.
ಈ ಹಿಂದೆ ಚಂದಾದಾರರು ಸಲ್ಲಿಸಿರುವ ಅರ್ಜಿಗಳ ಕುರಿತು ತಡೆ ನೀಡಲಾಗಿದೆ. ಚಂದಾದಾರರ ಅರ್ಜಿಗಳು ಹಾಗೂ ಮಾರ್ಗದರ್ಶಿ ಗ್ರೂಪ್ನ ಅರ್ಜಿಗಳ ನಡುವೆ ಪರಸ್ಪರ ಸಂಬಂಧವಿದೆ. ಹೀಗಾಗಿ ಎರಡನ್ನೂ ಏಕಕಾಲಕ್ಕೆ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.