Breaking News

ರೈಲು ಟಿಕೆಟನ್ನು ಆನ್‌ಲೈನ್‌ನಲ್ಲಿ ರದ್ದು ಮಾಡಲು ಪ್ರಯತ್ನಿಸುವಾಗ 3.5 ಲಕ್ಷ ರೂಪಾಯಿ ಕಳೆದುಕೊಂಡ

Spread the love

ಸೈಬರ್ ಕಳ್ಳರು ಜನರ ಖಾತೆಗಳಿಂದ ಹಣ ದೋಚುವ ಪ್ರಕರಣಗಳು ಮುಂದುವರೆದಿವೆ.

ಈ ಕುರಿತು ಮತ್ತೊಂದು ಘಟನೆ ವರದಿಯಾಗಿದ್ದು, ಕೋಝಿಕ್ಕೋಡ್ ಮೂಲದ ವ್ಯಕ್ತಿ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ.

ಕೋಝಿಕ್ಕೋಡ್‌ನ ವ್ಯಕ್ತಿ ತನ್ನ ರೈಲು ಟಿಕೆಟನ್ನು ಆನ್‌ಲೈನ್‌ನಲ್ಲಿ ರದ್ದು ಮಾಡಲು ಪ್ರಯತ್ನಿಸುವಾಗ 3.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅವರ ಎಸ್​ಬಿ ಮತ್ತು ಎಫ್​ಡಿ ಖಾತೆಗಳಿಂದ ಹಣ ದೋಚಲಾಗಿದೆ. 3 ಸೀಕ್ರೆಟ್ ಕೋಡ್ ವೆರಿಫಿಕೇಶನ್ ಮತ್ತು 2 ಒಟಿಪಿ ವೆರಿಫಿಕೇಶನ್​ಗಳ ನಂತರ ಖಾತೆಯಿಂದ ಹಣ ಕಳ್ಳತನ ಮಾಡಲಾಗಿದೆ. ಈ ಪ್ರಕರಣ ಪೊಲೀಸ್ ತನಿಖಾಧಿಕಾರಿಗಳ ಅಚ್ಚರಿಗೂ ಕಾರಣವಾಗಿದೆ. ಪೊಲೀಸರ ಪ್ರಕಾರ, ಇಂಥ ವಂಚನೆ ನಡೆದಿರುವುದು ಇದೇ ಮೊದಲು.

ಕೋಝಿಕ್ಕೋಡ್ ಸ್ಥಳೀಯರೊಬ್ಬರು ಭಾರತೀಯ ರೈಲ್ವೆಯ ಅಧಿಕೃತ ವೆಬ್​ಸೈಟ್ IRCTC ಮೂಲಕ ಟಿಕೆಟ್​ ರದ್ದತಿ ಪ್ರಕ್ರಿಯೆ ಪ್ರಾರಂಭಿಸಿದ್ದರು. ಮೊಬೈಲ್‌ನಲ್ಲಿ ಸೈಟ್ ತೆರೆದಾಗ, ಅದೇ ವೆಬ್‌ಸೈಟ್ ಕಾಣಿಸಿದೆ. ಕೇಳಿದ ಒಟಿಪಿ ಸಂಖ್ಯೆ ನೀಡಿದ ನಂತರ, ಟಿಕೆಟ್ ಕೂಡಾ ಕ್ಯಾನ್ಸಲ್​ ಆಗಿದೆ. ಮರುಪಾವತಿ ಮೊತ್ತವನ್ನು ಖಾತೆಗೆ ಹಿಂತಿರುಗಿಸಲಾಗಿದೆ ಎಂಬ ಸಂದೇಶವೂ ಬಂದಿದೆ.

ಈ ವೇಳೆ ಖಾತೆಯನ್ನು ಪರಿಶೀಲಿಸಿದಾಗ 50 ಸಾವಿರ ರೂಪಾಯಿ ಡ್ರಾ ಆಗಿದೆ ಎಂದು ಸಂದೇಶ ಬಂದಿತ್ತು. ಕೆಲವೇ ಸೆಕೆಂಡ್‌ಗಳಲ್ಲಿ ಮತ್ತೆ 50,000 ರೂ. ಹಣ ಎಗರಿಸಲಾಗಿದೆ. ತಕ್ಷಣವೇ ಬ್ಯಾಂಕ್​ಗೆ ತೆರಳಿ ಖಾತೆ ಪರಿಶೀಲಿಸಿದಾಗ, ಮೂರೂವರೆ ಲಕ್ಷ ಹಣ ಕಳೆದುಕೊಂಡಿರುವುದು ಗೊತ್ತಾಗಿದೆ. ಅವರು ಕೂಡಲೇ ಮ್ಯಾನೇಜರ್​ಗೆ ದೂರು ನೀಡಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ನಿವೃತ್ತ ಸರ್ಕಾರಿ ನೌಕರ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ರಜೆಯಲ್ಲಿದ್ದಾರೆ. ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ