Breaking News

ವೃತ್ತಿಪರ ಕೋರ್ಸ್​ ಪ್ರವೇಶಕ್ಕೆ 62 ಲಕ್ಷ ಆಪ್ಷನ್ ಎಂಟ್ರಿ: ಪರಿಷ್ಕರಣೆಗೆ ನಾಳೆಯಿಂದ ಅವಕಾಶ

Spread the love

ಬೆಂಗಳೂರು : ನಾನಾ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಸಾಮಾನ್ಯ ಪರೀಕ್ಷೆ (ಸಿಇಟಿ) ಬರೆದಿರುವ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಭರ್ತಿ ಮಾಡಿಕೊಳ್ಳಲು ನೀಡಿದ್ದ ಅವಕಾಶ ಮುಕ್ತಾಯವಾಗಿದೆ.

ಈವರೆಗೆ 62 ಲಕ್ಷ ಸಂಯೋಜಿತವಾಗಿ ಐಚ್ಛಿಕಗಳನ್ನು ದಾಖಲಿಸಲಾಗಿದೆ.

ಆಗಸ್ಟ್ 5ರ ಸಂಜೆಯಿಂದ ಆಗಸ್ಟ್ 8ರವರೆಗೆ ನೀಡಲಾಗಿದ್ದ ಸಂಯೋಜಿತ ಐಚ್ಛಿಕ ದಾಖಲೆ (ಕಂಬೈನ್ಡ್ ಆಪ್ಷನ್ ಎಂಟ್ರಿ) ಮೂಲಕ 1.2 ಲಕ್ಷ ಆಕಾಂಕ್ಷಿಗಳಿಂದ 62 ಲಕ್ಷ ಎಂಟ್ರಿ ದಾಖಲಿಸಿದೆ. ಇದರಲ್ಲಿ ಹೆಚ್ಚಿನ ಎಂಟ್ರಿ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಬಂದಿದೆ. ಒಟ್ಟು ಇಂಜಿನಿಯರಿಂಗ್ ಕೋರ್ಸ್​ಗೆ 45 ಲಕ್ಷ, ವೈದ್ಯಕೀಯ ಕೋರ್ಸ್​ಗೆ 10 ಲಕ್ಷ, ಕೃಷಿ ವಿಜ್ಞಾನ ಕೋರ್ಸ್ ಗೆ 2.5 ಲಕ್ಷ ಮತ್ತು ಪಶುವೈದ್ಯಕೀಯ ವಿಜ್ಞಾನ ಕೋರ್ಸ್​ಗೆ 75,000 ಎಂಟ್ರಿಗಳು ಬಂದಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಮಾಹಿತಿ ನೀಡಿದರು.

ನಾನಾ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ಸಿಇಟಿ ಮತ್ತು ನೀಟ್ ಸೀಟ್ ಮ್ಯಾಟ್ರಿಕ್ಸ್ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಅದರಂತೆ ಅರ್ಹ ಅಭ್ಯರ್ಥಿಗಳು ತಮ್ಮ ಆದ್ಯತೆ ಅನುಸಾರ ಸಂಯೋಜಿತವಾಗಿ ಐಚ್ಛಿಕಗಳನ್ನು ದಾಖಲಿಸಿದ್ದು, ಅಭ್ಯರ್ಥಿಗಳು ತಮ್ಮ ಐಚ್ಛಿಕಗಳನ್ನು ಬದಲಿಸಲು ಅಥವಾ ಪರಿಷ್ಕರಿಸಲು ಆಗಸ್ಟ್ 11ರ ಬೆಳಗ್ಗೆ 8 ಗಂಟೆಯಿಂದ 14ರ ಬೆಳಗ್ಗೆ 11 ಗಂಟೆವರೆಗೆ ಅವಕಾಶ ಕಲ್ಪಿಸಿದೆ.

ನೈಜ ಸೀಟು ಹಂಚಿಕೆ ಫಲಿತಾಂಶ: ಇದಕ್ಕೂ ಮೊದಲು ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಆಗಸ್ಟ್ 16 ರಂದು ಬೆಳಗ್ಗೆ 6 ಗಂಟೆಗೆ ಮೊದಲನೇ ಸುತ್ತಿನ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಕೋರ್ಸ್​ಗಳಿಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ಆದ್ಯತೆಗಳನ್ನು ಒಂದೇ ಪೋರ್ಟಲ್​ನಲ್ಲಿ ದಾಖಲಿಸಬೇಕು ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ