ಹುಬ್ಬಳ್ಳಿ : ಮಳೆಗಾಲದ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ವಾರಾಂತ್ಯ ಹಾಗೂ ಸಾರ್ವಜನಿಕ ರಜಾ ದಿನಗಳಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಆರಂಭಿಸಲಾದ ಒಂದು ದಿನದ ಟೂರ್ ಪ್ಯಾಕೇಜ್ ವಿಶೇಷ ಬಸ್ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಈ ವ್ಯವಸ್ಥೆಯನ್ನು ಬೇರೆ ಸ್ಥಳಗಳಿಗೂ ವಿಸ್ತರಿಸುವಂತೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಮತ್ತಷ್ಟು ಒಂದು ದಿನದ ಟೂರ್ ಪ್ಯಾಕೇಜ್ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿಶೇಷ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಪ್ರತಿ ಭಾನುವಾರ, 2ನೇ ಮತ್ತು 4ನೇ ಶನಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಸೇವೆ ಲಭ್ಯವಿದೆ.
- ಬೆಳಗಾವಿ-ಕೊಲ್ಲಾಪುರ : ವೋಲ್ವೋ ಎಸಿ ಬಸ್ ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುತ್ತದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಶ್ರೀ ಕ್ಷೇತ್ರ ಕನ್ನೆರಿ ಮಠ ದರ್ಶನ ಮುಗಿಸಿಕೊಂಡು ಸಂಜೆ 7:30ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ 600 ರೂ.
- ಬೆಳಗಾವಿ-ದಾಂಡೇಲಿ : ವೇಗದೂತ ಬಸ್ ಬೆಳಗ್ಗೆ 7-30ಕ್ಕೆ ಹೊರಡುತ್ತದೆ. ಕಕ್ಕೇರಿ ಬಿಷ್ಟದೇವಿ ದೇವಸ್ಥಾನ, ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಪಾರ್ಕ್, ಕೂಳಗಿ ನೇಚರ್ ಪಾರ್ಕ್ ವೀಕ್ಷಣೆ ಮುಗಿಸಿಕೊಂಡು ಸಂಜೆ 7:45 ಕ್ಕೆ ಹಿಂದಿರುತ್ತದೆ. ಪ್ರಯಾಣ ದರ 360 ರೂ.
- ಬೆಳಗಾವಿ ನಗರ ಪ್ರವಾಸ : ಮಿಡಿ ನಗರ ಸಾರಿಗೆ ಬಸ್ ಬೆಳಗೆ 8:45 ಕ್ಕೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುತ್ತದೆ. ಬೆಳಗಾವಿ ರಾಜಹಂಸಾಗಡ, ಮಿಲಿಟರಿ ಶ್ರೀ ಮಹಾದೇವ ದೇವಸ್ಥಾನ, ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯ ಹಾಗೂ ಹುಚೇವಾರಿ ಮಠ ಶ್ರೀ ರೇವಣಸಿದ್ದೇಶ್ವರ ಮಂದಿರ ವೀಕ್ಷಣೆ ಮುಗಿಸಿಕೊಂಡು ಸಂಜೆ 5-45 ಕ್ಕೆ ಹಿಂದಿರುತ್ತದೆ. ಪ್ರಯಾಣ ದರ 150 ರೂ.
- ಬೆಳಗಾವಿ ನವಿಲು ತೀರ್ಥ ಡ್ಯಾಮ್ : ವೇಗದೂತ ಬಸ್ ಬೆಳಿಗ್ಗೆ 7-45ಕ್ಕೆ ಹೊರಡುತ್ತದೆ. ಗಂಗಾಂಬಿಕ ಐಕ್ಯ ಸ್ಥಳ, ಎಂ.ಕೆ ಹುಬ್ಬಳ್ಳಿಯ ಶ್ರೀ ಅಶ್ವಥ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ, ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ, ಸೊಗಲ ಶ್ರೀ ಸೋಮೇಶ್ವರ ದೇವಸ್ಥಾನ ಹಾಗೂ ಮುನವಳ್ಳಿ ನವಿಲುತೀರ್ಥ ಡ್ಯಾಮ್ ವೀಕ್ಷಣೆ ಮುಗಿಸಿಕೊಂಡು ಸಂಜೆ 7-15ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ 350 ರೂ.
- ಬೆಳಗಾವಿ-ಮಹಿಪಾಲಘಡ : ವೇಗದೂತ ಬಸ್ ಬೆಳಿಗ್ಗೆ 7-45ಕ್ಕೆ ಹೊರಡುತ್ತದೆ. ಬೆಳಗಾವಿಯ ರಾಜಹಂಸ ಘಡ, ಬೆಳಗುಂದಿಯ ಶ್ರೀ ಸಿದ್ದೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ, ರಕ್ಕಸಕೊಪ್ಪ ಡ್ಯಾಮ್, ಧಾಮಣಿ ಫಾಲ್ಸ್/ ನೇಚರ್ ಕ್ಯಾಂಪ್ ಹಾಗೂ ಮಹಿಪಾಲ ಘಡ ಶ್ರೀ ವೈಜನಾಥ ದೇವಸ್ಥಾನ ವೀಕ್ಷಣೆ ಮುಗಿಸಿಕೊಂಡು ಸಂಜೆ 5-30ಕ್ಕೆ ಹಿಂದಿರುತ್ತದೆ. ಪ್ರಯಾಣದರ 200 ರೂ.
- ಬೆಳಗಾವಿ-ಬದಾಮಿ : ವೇಗದೋತ ಬಸ್ ಬೆಳಗ್ಗೆ 8ಕ್ಕೆ ಹೊರಡುತ್ತದೆ. ಗೋಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಬದಾಮಿಯ ಮೇಣ ಬಸದಿ, ಗುಹಾಂತರ ದೇವಾಲಯಗಳು, ಬನಶಂಕರಿ ದೇವಸ್ಥಾನ ಹಾಗೂ ಶ್ರೀ ಶಿವಯೋಗ ಮಂದಿರ ವೀಕ್ಷಣೆ ಮುಗಿಸಿಕೊಂಡು ಸಂಜೆ 5 -15ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ 270 ರೂ.
- ಬೆಳಗಾವಿ-ಕಕ್ಕೇರಿ : ವೇಗದೂತ ಬಸ್ ಬೆಳಗ್ಗೆ 7:45 ಕ್ಕೆ ಹೊರಡುತ್ತದೆ. ಬೆಳಗಾವಿಯ ರಾಜಹಂಸ ಘಡ, ಅಸೋಗಾ ಹೊಳೆದಂಡೆ, ನಂದಗಡ ಸಂಗೊಳ್ಳಿ ರಾಯಣ್ಣನ ಸಮಾಧಿ, ಹಲಸಿ ಭೂ ವರಹಾ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಹಾಗೂ ಕಕ್ಕೇರಿ ಶ್ರೀ ಬಿಷ್ಟಾದೇವಿ ದೇವಸ್ಥಾನ ವೀಕ್ಷಣೆ ಮುಗಿಸಿಕೊಂಡು ಸಂಜೆ 5 15ಕ್ಕೆ ಹಿಂದಿರುತ್ತದೆ. ಪ್ರಯಾಣ ದರ 230 ರೂ.
- ಮಾಹಿತಿಗಾಗಿ : ಮೊಬೈಲ್ ನಂ. 7760991631 /9945536685 ಸಂಪರ್ಕಿಸಬಹುದು.