ಟಿವಿ, ರೇಡಿಯೋ, ಕಾಮಿಕ್ ಸ್ಟ್ರಿಪ್, ವಿಡಿಯೋ ಗೇಮ್ ನಲ್ಲಿ ಕೇಳುತ್ತಿದ್ದ ಆ ಧ್ವನಿ ಕಿವಿಯಲ್ಲಿ ಈಗಲೂ ಪಿಸುಗುಡುತ್ತಿದೆ. ಸಿನಿಮಾಗಳಲ್ಲಿ ಕಣ್ರೆಪ್ಪೆಗಳನ್ನು ಮಿಟುಕಿಸದಂತೆ ನೋಡಿದ ಆ ದೃಶ್ಯ ಈಗಲೂ ರೋಮಾಂಚನ ಉಂಟುಮಾಡುತ್ತದೆ. ಅದೊಂದು ಸಾಲು ಕೇಳಿದರೆ ಸಾಕು, ನಮ್ಮ ನೆನಪುಗಳು ಬಾಲ್ಯದ ದಿನಗಳಿಗೆ ಜಾರಿ ಬಿಡುತ್ತದೆ. ಏಕೆಂದರೆ ಆ ಧ್ವನಿ ಇಡೀ ಜಗತ್ತಿನ ಎಲ್ಲ ಮನಸ್ಸುಗಳಿಗೆ ಒಂದು ರೀತಿ ಥ್ರಿಲ್ ಕೊಟ್ಟಂತಹ ಎಲ್ಲರಿಗೂ ಈಗಲೂ ಅಚ್ಚುಮೆಚ್ಚಿನ ಆ ಸಾಲುಗಳು ಜಗತ್ತಿಗೆ ವೆರಿ ಫೇವರಿಟ್ ಅದೇ ಬಾಂಡ್, ಜೇಮ್ಸ್ ಬಾಂಡ್…..
ಈ ಸಾಲುಗಳನ್ನು ಕೇಳಿದರೆ ಸಾಕು, ನಮ್ಮಲ್ಲಿ ಆಗುತ್ತಿದ್ದ ಆನಂದ ಅಷ್ಟಿಷ್ಟಲ್ಲ .ಬ್ರಿಟಿಷ್ ಸೀಕ್ರೆಟ್ ಸರ್ವಿಸ್ ಏಜೆಂಟ್ ಆಗಿ ನಾಯಕ ನಟ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಇದು ಕಾಮನ್ ಡೈಲಾಗ್. ಆದರೆ, ಈ ಸಂಭಾಷಣೆಗಿದ್ದ ಶಕ್ತಿಯೇ ಬೇರೆ. ಏಕೆಂದರೆ ಕೇವಲ ಇದೊಂದೇ ಡೈಲಾಗ್ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಮೈ-ಮನ ಆವರಿಸಿತ್ತು.
ಮನರಂಜನೆಯಲ್ಲಿ, ಗಳಿಕೆಯಲ್ಲಿ, ಜನಪ್ರಿಯತೆಯಲ್ಲಿ ಜೇಮ್ಸ್ ಬಾಂಡ್ ಸಿನಿಮಾಗಳು ಪ್ರಪಂಚದ ತುಂಬಾ ಹೊಸ ಮೇನಿಯಾ ಸೃಷ್ಟಿ ಮಾಡಿದ್ದವು. ಸಿನಿ ಪ್ರೇಕ್ಷಕರಿಗೆ ಸರಣಿ ರೂಪದಲ್ಲಿ ರಸದೌತಣ ಉಣಬಡಿಸಿದ ಇಂತಹ ಜೇಮ್ಸ್ ಬಾಂಡ್ ಸಿನಿಮಾಗಳು ಸೃಷ್ಟಿಯಾಗಿದ್ದ ಹಿನ್ನೆಲೆಯೇ ಬಲು ಕುತೂಹಲ.
ಇಯಾನ್ ಪ್ಲೇಮಿಂಗ್ ಎಂಬ ಯುವ ಲೇಖಕ ಪತ್ತೆದಾರಿ ಕಾದಂಬರಿಗಳ ಬಗ್ಗೆ ಅತ್ಯಂತ ಆಸಕ್ತದಾಯಕನಾಗಿರುತ್ತಾನೆ. 1952ರಲ್ಲಿ ಜೇಮ್ಸ್ ಬಾಂಡ್ ಎಂಬ ನಾಯಕನ ಪಾತ್ರ ಸೃಷ್ಟಿ ಮಾಡಿ ಅದರ ಸುತ್ತ ಹೆಣೆದಿದ್ದ ಕ್ಯಾಸಿನೋ ರಾಯಲೇ ಎಂಬ ಅದ್ಭುತ ಪತ್ತೆದಾರಿ ಕಾದಂಬರಿ ರಚಿಸುತ್ತಾನೆ. ಅದು ಪ್ಲೆಮಿಂಗ್‍ನ ಪ್ರಥಮ ಕಾದಂಬರಿಯಾಗಿದ್ದರಿಂದ ಅವನ ಆತ್ಮೀಯ ಗೆಳೆಯ ವಿಲಿಯಮ್ ಪ್ಲೊಮರ್‍ಗೆ ಪ್ರತಿಯನ್ನು ಓದಲು ಕೊಡುತ್ತಾನೆ.
ಕಾದಂಬರಿ ಓದಿ ತುಂಬಾ ಮೆಚ್ಚಿಕೊಂಡ ಪ್ರೊಮರ್ ತನಗೆ ಪರಿಚಯವಿದ್ದ ಪ್ರತಿಷ್ಠಿತ ಪುಸ್ತಕ ಪ್ರಕಾಶನದ ಮಾಲೀಕ ಜೋನಾತನ್ ಕೆಪೆಗೆ ಕಾದಂಬರಿ ಪ್ರಕಟಿಸಲು ಮನವಿ ಮಾಡುತ್ತಾನೆ. ಆದರೆ, ಜೋನತಾನ್ ಕೆಪೆಗೆ ಆ ಕಾದಂಬರಿ ಇಷ್ಟವಾಗದ ಕಾರಣ ಪ್ರಕಟ ಮಾಡುವುದಿಲ್ಲ. ಇದರಿಂದ ನಿರಾಸೆಗೊಂಡ ಇಯಾನ್ ಫ್ಲೆಮಿಂಗ್ ಮಿಲಿಟರಿಯಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದ ಸಹೋದರ ಪೀಟರ್ ಜತೆ ದುಃಖ ಹಂಚಿಕೊಳ್ಳುತ್ತಾನೆ.
ಕೊನೆಗೆ ಪೀಟರ್, ಪ್ರಕಾಶಕ ಜೋನಾತನ್ ಕೆಪೆಗೆ ಹೇಳಿ ಕಾದಂಬರಿಯನ್ನು ಜಗತ್ತಿನಾದ್ಯಂತ ಪ್ರಕಟ ಮಾಡಿಸುತ್ತಾನೆ. ಆ ಕಾದಂಬರಿಯನ್ನು ಓದಿದ ಎಲ್ಲರೂ ಪ್ರೀತಿಯಿಂದ ಬಾಚಿ ತಬ್ಬಿಕೊಳ್ಳುತ್ತಾರೆ. ಯಾವ ಪ್ರಕಾಶಕ ಪ್ರಕಟ ಮಾಡುವುದಿಲ್ಲ ಎಂದು ಹೇಳಿದ್ದನೋ, ಆತನೇ ಇಯಾನ್ ಫ್ಲೆಮಿಂಗ್ ಕೈಯಲ್ಲಿ ಕಾದಂಬರಿ ಬರೆಸಲು ದುಂಬಾಲು ಬೀಳುತ್ತಾನೆ. ಅಲ್ಲಿಂದ ಶುರುವಾಯಿತು ನೋಡಿ ಕಾದಂಬರಿಯಲ್ಲಿ ಜೇಮ್ಸ್ ಬಾಂಡ್ ಹವಾ.
1953 ರಿಂದ 1966ರಲ್ಲಿ ಆತ ಸಾಯುವುದರೊಳಗೆ 12 ಕಾದಂಬರಿಗಳನ್ನು ಬರೆದು ಮುಗಿಸಿ ಓದುಗರ ಮಡಿಲಿಗಿಟ್ಟಿದ್ದ. 2 ಕಿರು ಚಿತ್ರಗಳನ್ನು ತಯಾರಿಸಿ ತೆರೆಯ ಮೂಲಕ ಜೇಮ್ಸ್ ಬಾಂಡ್ ಪಾತ್ರದ ಪರಿಚಯವನ್ನು ಜಗತ್ತಿಗೆ ಮಾಡಿಸಿದ್ದ. ಇದರಿಂದಲೇ ಸ್ಪೂರ್ತಿ ಪಡೆದ ಹಾಲಿವುಡ್ ಚಿತ್ರರಂಗ ಪ್ರಥಮ ಬಾರಿಗೆ 1962ರಲ್ಲಿ ಈ್ಕ.ಘೆu.(ಡಾಕ್ಟರ್ ನೋ) ಎಂಬ ಚಿತ್ರ ತಯಾರಿಕೆಗೆ ಮುಂದಾಗುತ್ತದೆ.
1958ರಲ್ಲಿ ಇಯಾನ್ ಫ್ಲೆಮಿಂಗ್ ಬರೆದಿದ್ದ ಕಾದಂಬರಿ Same Name ಎಂಬ ಕಥೆಯನ್ನು ಬ್ರಿಟನ್ ಸ್ಪೈ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಟೆರೆಸ್ ಯಂಗ್ ನಿರ್ದೇಶನದ ಜವಬ್ದಾರಿ ಹೊತ್ತಿರುತ್ತಾರೆ. ಆಲ್ಬರ್ಟ್ ಬ್ರೋಕಲಿ ಮತ್ತು ಹ್ಯಾರಿ ಸಾಲ್ಟಜ್ ಮ್ಯಾನ್ ರವರು ಈ ಚಿತ್ರಕ್ಕೆ ಬಂಡವಾಳ ಹೂಡಿರುತ್ತಾರೆ. ಎಲ್ಲವೂ ಅಂತಿಮವಾದ ಮೇಲೆ ಜೇಮ್ಸ್ ಬಾಂಡ್ ಪಾತ್ರಕ್ಕೆ ನಾಯಕನ ಅನ್ವೇಷಣೆ ಶುರುವಾಗುತ್ತದೆ.
ಒಂದು ದಿನ ಅನಿರೀಕ್ಷಿತವಾಗಿ ಸಾಲ್ಟಜ್ ಮ್ಯಾನ್ ರವರು ಒಂದು ಕಾರ್ಯಕ್ರಮದಲ್ಲಿ ಥಾಮಸ್ ಸೀಯನ್ ಕೊನೆರಿ ಎಂಬ ಅದ್ಭುತ ಪ್ರತಿಭಾವಂತ ಕಲಾವಿದನನ್ನು ಭೇಟಿ ಮಾಡುತ್ತಾರೆ. ಜೇಮ್ಸ್ ಬಾಂಡ್ ಸಿನಿಮಾ ಮಾಡುತ್ತಿದ್ದೇವೆ. ನೀವೇ ಅದಕ್ಕೆ ನಾಯಕ ನಟರು ಎಂದು ಹೇಳಿ ಯಾವ ಸ್ಕ್ರೀನ್ ಟೆಸ್ಟ್ ಮಾಡದೆ ಅಲ್ಲಿಯೇ ಮುಂಗಡ ಹಣವನ್ನು ನೀಡಿ ಕಚೇರಿಗೆ ಬನ್ನಿ ಚಿತ್ರೀಕರಣದ ದಿನಾಂಕ ತಿಳಿಸುತ್ತೇವೆ ಎಂದು ಹೇಳಿ ಕಚೇರಿಯ ವಿಳಾಸ ಕೊಟ್ಟು ಬರುತ್ತಾರೆ. ಅಲ್ಲಿಂದಲೇ ನೋಡಿ ಥಾಮಸ್ ಬದುಕಿನಲ್ಲಿ ಅದೃಷ್ಟ ಲಕ್ಷ್ಮಿ ತಾಂಡವ ಆಡುತ್ತಿರುತ್ತಾಳೆ.
ಚಿತ್ರ ಬಿಡುಗಡೆಯಾಗಿ ಜಗತ್ತಿನಾದ್ಯಂತ ದೊಡ್ಡ ಅಲೆಯನ್ನೇ ಎಬ್ಬಿಸಿಬಿಡುತ್ತದೆ.ಅಲ್ಲಿಂದ ಶುರುವಾದ ಸಾಲು ಸಾಲು ಜೇಮ್ಸ್ ಬಾಂಡ್ ಸರಣಿ ಚಿತ್ರಗಳು ಎಲ್ಲರ ಮನೆ ಮಾತಾಗುತ್ತವೆ. ಪ್ರತಿಯೊಬ್ಬರ ಬಾಯಲ್ಲಿ ಜೇಮ್ಸï ಬಾಂಡ್ ತನ್ನ ಮನೆಯವರ ಹೆಸರುಗಳಷ್ಟೇ ಮನಸ್ಸಿಗೆ ಹತ್ತಿರವಾಗುತ್ತದೆ, ಇಷ್ಟವಾಗುತ್ತದೆ. ಪ್ರಂ ರಷಿಯಾ ವಿತ್ ಲವ್, ಗೋಲ್ಡ್ ಫಿಂಗರ್, ಥಂಡರ್ ಬಾಲï, ಯು ಒನ್ಲಿ ವೀವ್ ಟ್ವೆ ೈಸ್, ಡೈಮಂq್ಸï ಆರ್ ಪಾರೇವರ್ ಹೀಗೆ ಸಾಲು ಸಾಲು ಜೇಮ್ಸ್ ಬಾಂಡ್ ಸಿರೀಸ್ ಪಾತ್ರಗಳಲ್ಲಿ ನಟಿಸಿದ್ದ ಥಾಮಸ್ ಸಿಯನ್ ಕೊನೆರಿಯ ಬದುಕಿನ ಕಥೆ ಈಗಿನ ಪೀಳಿಗೆಗೆ ದೊಡ್ಡ ಇನ್ಸಿಪಿರೇಷನ್.
ಅತ್ಯಂತ ಕಡು ಬಡತನದಲ್ಲಿ ಹುಟ್ಟಿದ್ದ ಥಾಮಸ್ ಕೊಳಗೇರಿ ಕಾಲೋನಿಯ ಕೊಟ್ಟಿಗೆಯಲ್ಲಿದ್ದ ಶೌಚಾಲಯದಲ್ಲಿ ವಾಸವಾಗಿ ರುತ್ತಾನೆ. ತಂದೆ ರಬ್ಬರ್ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕ, ತಾಯಿ ಅವರಿವರ ಮನೆ ಕೆಲಸ ಮಾಡುತ್ತಿರುತ್ತಾಳೆ. ಥಾಮಸ್ ತನ್ನ 9ನೆ ವಯಸ್ಸಿನಲ್ಲಿ ಬೆಳಗ್ಗೆ ಐದು ಗಂಟೆಗೆ ಎದ್ದು ಕುದುರೆ ಗಾಡಿಯಲ್ಲಿ ತೆರಳಿ ಮನೆ ಮನೆಗೆ ಹಾಲು ಹಾಕಿಬಂದು ಶಾಲೆಗೆ ಹೋಗುತ್ತಾನೆ. ಅಮ್ಮ ಮಾಡುತ್ತಿದ್ದ ಗಂಜಿಯನ್ನು ನನ್ನ ತಮ್ಮನಾದರೂ ಹೊಟ್ಟೆ ತುಂಬಿಸಿಕೊಳ್ಳಲಿ ಎಂದು ಅವನಿಗೆ ಕೊಟ್ಟು ಥಾಮಸ್ ಹೊಟ್ಟೆ ತುಂಬಾ ನೀರು ಕುಡಿದು ಶಾಲೆಗೆ ಹೋಗುತ್ತಿದ್ದ.
13ನೆ ವಯಸ್ಸಿಗೆ ತಲುಪಿದಾಗ ಥಾಮಸ್ ದಿನಪೂರ್ತಿ ಹಾಲು ಹಾಕುವ ಕೆಲಸಕ್ಕೆ ಸೇರಿಕೊಂಡ. ಅಲ್ಲಿಯೂ ಬರ್ಕಾತ್ತಾಗದೇ ಬೂಟ್‍ಗಳಿಗೆ ಬಣ್ಣ ಹಾಕುವ ಕೆಲಸ, ಹೆಣದ ಪೆಟ್ಟಿಗೆ ತಯಾರಿ ಮಾಡುವ ಕೆಲಸ. ಆಮೇಲೆ ಬ್ರಿಟನ್‍ಗೆ ಎರಡನೆ ಮಹಾಯುದ್ಧದಲ್ಲಿ ಸೈನ್ಯಕ್ಕೆ ಸೇರಿ ಅಲ್ಲಿ 5 ವರ್ಷ ಕೆಲಸ ಮಾಡುತ್ತಾನೆ.ಅಲ್ಲಿಯು ಅಲ್ಸರ್ ಆಗಿ ಆರೋಗ್ಯ ಕೈ ಕೊಟ್ಟಾಗ ಸೇನೆಯಿಂದ ಮನೆಗೆ ಕಳಿಸುತ್ತಾರೆ. ಆಮೇಲೆ ಸ್ವಲ್ಪ ತಿಂಗಳುಗಳ ಕಾಲ ವಿಶ್ರಾಂತಿಯಲ್ಲಿದ್ದ ಥಾಮಸ್ ಗೆಳೆಯನ ಜತೆ ಸೇರಿ ಬಾಡಿ ಬಿಲ್ಡಿಂಗ್ ಮಾಡಿ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ಎತ್ತರದ ವಿಭಾಗದಲ್ಲಿ ತೃತೀಯ ಶ್ರೇಣಿಯ ಬಹುಮಾನ ಪಡೆಯುತ್ತಾನೆ.
ಇದನ್ನು ನೋಡಿದ ಬಿಬಿಸಿ ವಾಹಿನಿಯವರು ಪ್ಲೇ ಹೌಸ್ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಪಾತ್ರ ನೀಡುತ್ತಾರೆ. ಅದರಲ್ಲಿ ಥಾಮಸ್ ಪ್ರತಿಭೆಯನ್ನು ನೋಡಿದ ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತ shambling and inarticulate charm ಎಂಬ ಶೀರ್ಷಿಕೆಯಲ್ಲಿ ಥಾಮಸ್ ಪ್ರತಿಭೆಯ ಬಗ್ಗೆ ಲೇಖನ ಬರೆದ. ಅದನ್ನು ಓದಿದ ಚಿತ್ರರಂಗ 24 ಗಂಟೆ ಒಳಗೆ ಥಾಮಸ್ ಅವರನ್ನು ಚಿತ್ರಗಳಿಗೆ ನಟರಾಗಿ ಬುಕ್ ಮಾಡಿಕೊಂಡಿದ್ದರು.
ಪೋಷಕ ಪಾತ್ರ, ಖಳ ನಟನ ಪಾತ್ರ ಹೀಗೆ ಹಲವು ಸರ್ಕಸ್ ಮಾಡಿ ಜೇಮ್ಸ್ ಬಾಂಡ್ ಚಿತ್ರದಲ್ಲಿ ನಟಿಸಿದ ಮೇಲೆ ವಲ್ರ್ಡ್ ಫೇಮಸ್ ಸ್ಟಾರ್ ಆಗಿದ್ದು ಒಂದು ದೊಡ್ಡ ಇತಿಹಾಸ. ಥಾಮಸ್ ಶ್ರಮಜೀವಿ, ಭಾವುಕ ಮನುಷ್ಯ, ಕನಸುಗಾರ, ಕೋಪಿಷ್ಟ, ಪುಸ್ತಕ ಪ್ರೇಮಿ, ಗಾಲ್ಫ್ ಆಟಗಾರ. ನಟನೆಯಷ್ಟೇ ಗಾಲ್ಫ್ ಆಟವನ್ನು ಪ್ರೀತಿಸುತ್ತಿದ್ದ ಥಾಮಸ್ ಗಾಲ್ಫ್ ಆಟ ಆಡಲು ತಮ್ಮ ಕೊನೆಯ ದಿನಗಳಲ್ಲಿ 22 ಗಾಲ್ಫ್ ಕೋರ್ಸ್‍ಗಳನ್ನು ಹೊಂದಿದ್ದ ಮೆಲ್ಬೋರ್ನ್‍ನಲ್ಲಿ ಉಳಿದುಕೊಂಡಿದ್ದರು .
ಥಾಮಸ್‍ಗೆ ಬಾಲ್ಯದಿಂದಲೂ ಅತಿ ಹೆಚ್ಚು ಪುಸ್ತಕ ಓದುವ ಹುಚ್ಚಿತ್ತು. ಒಂದು ಸಂದರ್ಶನದಲ್ಲಿ ಅವರೇ ಹೇಳಿದಂತೆ ದಿ ಬುಕ್ ರೀಡಿಂಗ್, ದಟ್ ಕೆನ್ ಚೇಂಜ್ ಒನ್ ಸು ಲೈಫ್. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಬಂದ ಹಣವನ್ನೆಲ್ಲ ಸ್ಕಾಟ್ಲೆಂಡ್ ಸಮಾಜ ಸೇವೆಗೆ ನೀಡಿದ್ದಾರೆ.
ಬರೀ ಬಡತ ದಲ್ಲೇ ಬಾಲ್ಯವನ್ನು ಕಳೆದು ಹೋರಾಟದ ಮೂಲಕ ಜೀವನವನ್ನು ಕಟ್ಟಿಕೊಂಡು ಇಡೀ ಪ್ರಪಂಚವೇ ತಲೆ ಬಾಗಿ ನಮಸ್ಕಾರ ಮಾಡುವಷ್ಟು ಗೌರವ, ಪ್ರೀತಿ ಸಂಪಾದನೆ ಮಾಡಿದ ಥಾಮಸ್ ಸಿಯಾನ್ ಅಕ್ಟೋಬರ್ 31ರಂದು ತಮ್ಮ 90 ವರ್ಷದ ತುಂಬು ಜೀವನವನ್ನು ಮುಗಿಸಿ ನಿನ್ನೆ ಭೂಮಿಯ ಯಾತ್ರೆ ಮುಕ್ತಾಯ ಮಾಡಿಕೊಂಡು ಇನ್ನೆಂದೂ ಬಾರದ ಲೋಕಕ್ಕೆ ಹೋಗಿದ್ದಾರೆ. ಇಬ್ಬರು ಹೆಂಡತಿಯರು, ನಾಲ್ಕು ಮಕ್ಕಳನ್ನು ಹೊಂದಿದ್ದ ಆಸ್ಕರ್ ಪ್ರಶಸ್ತಿ ವಿಜೇತ ಥಾಮಸ್ ಕೊನೆರಿ ಜೀವನದ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಲಿ.