ಸೊಲ್ಲಾಪುರ (ಮಹಾರಾಷ್ಟ್ರ): ಪ್ರೇಮ ವಿವಾಹಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದರಿಂದ ಮಗಳು ತಂದೆಯ ಹತ್ಯೆಗೆ ಸಂಚು ರೂಪಿಸಿದ್ದಾಳೆ.
ಕೊಲೆ ಮಾಡಲು ನಾಲ್ವರಿಗೆ 60 ಸಾವಿರ ರೂ. ಸುಪಾರಿ (ತಲಾ 15 ಸಾವಿರ) ನೀಡಿದ್ದಾಳೆ. ಸೊಲ್ಲಾಪುರದ ಮಾಧಾ ಪೊಲೀಸರು ಕೂಲಂಕಷವಾಗಿ ವಿಚಾರಣೆ ನಡೆಸಿದ ಬಳಿಕ ಯುವತಿ, ಪ್ರಿಯಕರ ಹಾಗೂ ತಂದೆಯ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ. ತಾಲೂಕಿನ ವಡಚಿ ವಾಡಿಯಲ್ಲಿ ಈ ಘಟನೆ ನಡೆದಿದೆ.
ಗಾಯಾಳು ಯವತಿಯ ತಂದೆ ಮಾದ ತಾಲೂಕಿನ ನಿವಾಸಿ ಮಹೇಂದ್ರ ಶಾ ಎಂದು ಗುರುತಿಸಲಾಗಿದೆ.
ಸಾಕ್ಷಿ ಶಾ ಮತ್ತು ಆಕೆಯ ಗೆಳೆಯ ಚೈತನ್ಯ ಆರೋಪಿಗಳು. ಖ್ಯಾತ ಉದ್ಯಮಿಯೂ ಆಗಿರುವ ಮಹೇಂದ್ರ ಶಾ ಅವರಿಗೆ ತೀವ್ರವಾಗಿ ಥಳಿಸಲಾಗಿದೆ.