Breaking News

ಅಕ್ಕಿ, ಗೋಧಿ ಮಾರಾಟ; ಬೆಲೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ

Spread the love

ನವದೆಹಲಿ : ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿಯಲ್ಲಿ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಸ್ಥಳೀಯ ಮಾರುಕಟ್ಟೆಗಳಲ್ಲಿ ಅಕ್ಕಿ ಮತ್ತು ಗೋಧಿಯ ಬೆಲೆಗಳನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಆಗಸ್ಟ್ 7 ರ ಹೊತ್ತಿಗೆ ಕಳೆದ ಒಂದು ವರ್ಷದಲ್ಲಿ ಗೋಧಿ ಬೆಲೆಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇಕಡಾ 6.77 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡಾ 7.37 ರಷ್ಟು ಹೆಚ್ಚಾಗಿವೆ. ಹಾಗೆಯೇ ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಶೇಕಡಾ 10.63 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡಾ 11.12 ರಷ್ಟು ಏರಿಕೆಯಾಗಿವೆ. ಆಗಸ್ಟ್ 9 ರಂದು ರಾಜಧಾನಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಅಕ್ಕಿಯ ಮೀಸಲು ಬೆಲೆಯನ್ನು ಪ್ರತಿ ಕೆ.ಜಿ.ಗೆ 2 ರೂ. ಇಳಿಸಿ 29 ರೂ. ಗೆ ನಿಗದಿಪಡಿಸಲಾಗುತ್ತಿದೆ ಎಂದು ಹೇಳಿದರು.

ಭಾರತೀಯ ಆಹಾರ ನಿಗಮದ ವತಿಯಿಂದ ಒಎಂಎಸ್‌ಎಸ್ ಮೂಲಕ ಮಾರಾಟ ಮಾಡಲಾಗುತ್ತಿರುವ ಅಕ್ಕಿಯನ್ನು ಖರೀದಿಸಲು ಸಾಕಷ್ಟು ಸಂಸ್ಥೆಗಳು ಮುಂದೆ ಬಾರದ ಕಾರಣದಿಂದ ಕೇಂದ್ರವು ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರ ನೀಡಿದ ಒಟ್ಟು 5 ಲಕ್ಷ ಟನ್ ಅಕ್ಕಿಯಲ್ಲಿ ಕೇವಲ 0.38 ಪ್ರತಿಶತ (19,000 ಟನ್) ಮಾತ್ರ ಮಾರಾಟ ಮಾಡಲು ಸಾಧ್ಯವಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಏತನ್ಮಧ್ಯೆ ಒಎಂಎಸ್‌ಎಸ್ ಮೂಲಕ ನೀಡಲಾಗುವ ಒಟ್ಟು 55 ಪ್ರತಿಶತದಷ್ಟು ಗೋಧಿಯನ್ನು ಮಾರಾಟ ಮಾಡಲಾಗಿದೆ. ಜೂನ್ 23 ರಂದು 15 ಲಕ್ಷ ಟನ್ ಗೋಧಿ ನೀಡಲಾಗಿದ್ದು, ಇಲ್ಲಿಯವರೆಗೆ ನಡೆದ ಏಳು ಇ-ಹರಾಜಿನಲ್ಲಿ 8.2 ಲಕ್ಷ ಟನ್ ಗೋಧಿ ಮಾರಾಟವಾಗಿದೆ. “ಪ್ರತಿ ಹರಾಜಿನಲ್ಲಿ ಗೋಧಿಗೆ ನಿರಂತರ ಬೇಡಿಕೆ ಕಂಡು ಬಂದಿದ್ದು, ಗೋಧಿಯ ಸರಾಸರಿ ಮಾರಾಟ ಬೆಲೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರದ ಈ ಕ್ರಮಗಳು ಆಹಾರ ಹಣದುಬ್ಬರವನ್ನು ಕಡಿಮೆ ಮಾಡಲಿವೆ” ಎಂದು ಚೋಪ್ರಾ ಹೇಳಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ