Breaking News

ಸತತ ಮಳೆ ಮತ್ತು ವರದಾ ನದಿಯ ಪ್ರವಾಹದಿಂದ ರೈತ ನಾಲ್ಕೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಹಾನಿ

Spread the love

ಹಾವೇರಿ: ಕಳೆದ ಎರಡು ತಿಂಗಳಿಂದ ಎಲ್ಲೆಡೆ ಕಿಚನ್​ ಕ್ವೀನ್​ ಟೊಮೆಟೊದ್ದೇ ಮಾತು.

ಟೊಮೆಟೊ ಬೆಳೆ ಈ ಬಾರಿ ರೈತರ ಕೈ ಹಿಡಿದಿದ್ದು, ಅಧಿಕ ಲಾಭ ತಂದುಕೊಟ್ಟಿದೆ. ಇದರ ನಡುವೆ ಕೆಲ ರೈತರು ಟೊಮೆಟೊ ಕಳ್ಳತನವಾಗಬಾರದು ಎಂದು ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾರೆ. ಆದರೆ ಹಾವೇರಿ ಸಮೀಪದ ದೇವಗಿರಿ ಗ್ರಾಮದ ಟೊಮೆಟೊ ಬೆಳೆಗಾರ ದುರ್ಗಪ್ಪ ಎಂಬುವನ ಕಥೆ ಇದಕ್ಕೆ ಭಿನ್ನವಾಗಿದೆ. ದೇವಗಿರಿಯ ವರದಾ ನದಿ ತಟದಲ್ಲಿ ನಾಲ್ಕೂವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದ ರೈತ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಮಾರುಕಟ್ಟೆಯಲ್ಲಿ ಟೊಮೆಟೊಗೆ ಬಂಗಾರದ ಬೆಲೆ ಇದೆ, ರೈತ ದುರ್ಗಪ್ಪನ ಜಮೀನಿನಲ್ಲಿ ಸಹ ಗಿಡದ ತುಂಬಾ ಟೊಮೆಟೊ ಬಿಟ್ಟಿವೆ. ಆದರೆ ಸತತ ಮಳೆ ಮತ್ತು ವರದಾ ನದಿಯ ನೀರಿನಿಂದ ದುರ್ಗಪ್ಪನ ಜಮೀನಿಗೆ ನೀರು ನುಗ್ಗಿತ್ತು. ಮಳೆ ಕಡಿಮೆಯಾಗಿ ವರದಾ ನದಿಯ ಪ್ರವಾಹ ಇಳಿಮುಖವಾದರೂ ಸಹ ರೈತನ ಸಮಸ್ಯೆ ಬಗೆಹರಿದಿಲ್ಲ. ಟೊಮೆಟೊ ಕಾಯಿಗಳು ಅಧಿಕ ನೀರಿನಿಂದ ಕೊಳೆಯುತ್ತಿವೆ. ಪ್ರತಿ ಗಿಡದಲ್ಲಿ 5ಕ್ಕೂ ಅಧಿಕ ಟೊಮೆಟೊ ಹಣ್ಣುಗಳು ಹಾಳಾಗಿವೆ.


Spread the love

About Laxminews 24x7

Check Also

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Spread the loveಶ್ರೀನಗರ: ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ  ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ