Breaking News

ಬಾಬಾ ಸಾಹೇಬರ ಲೇಖನಿಯಿಂದ ಭಾರತ ಬದಲಾಯಿತು: ಜ್ಞಾನಪ್ರಕಾಶ ಸ್ವಾಮೀಜಿ

Spread the love

ಬೆಳಗಾವಿ: “ಜೀವ ಜಗತ್ತಿನಲ್ಲಿ ಮಹಿಳೆಯೇ ಶ್ರೇಷ್ಠ ಎಂದಿದ್ದರೂ ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಶೋಷಿತ ಸಮುದಾಯಗಳೂ ಹೊರತಾಗಿಲ್ಲ. ಇದೆಲ್ಲದಕ್ಕೂ ಕಡಿವಾಣ ಹಾಕಬೇಕಿದ್ದರೆ ಶೋಷಿತ ಸಮುದಾಯಗಳು ಸುಶಿಕ್ಷಿತರಾಗಬೇಕು. ಆಗ ಮಾತ್ರ ಶಾಹುಮಹಾರಾಜರು ಮತ್ತು ಮಹಾತ್ಮಾ ಫುಲೆ ದಂಪತಿಯ ಕನಸು ನನಸಾಗಿಸಲು ಸಾಧ್ಯ” ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು. ಬೆಳಗಾವಿಯ ಕುಮಾರ ಗಂಧರ್ವ ಕಲಾಭವನದಲ್ಲಿ ಛತ್ರಪತಿ ಶಾಹುಮಹಾರಾಜರ 144ನೇ ಜಯಂತಿ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಆಯೋಜಿಸಿದ್ದ ‘ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯಕ್ಕಾಗಿ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

“ಬಿಳಿ ಮತ್ತು ಕಪ್ಪು ಬಣ್ಣದ ಬಗ್ಗೆ ಇಂದು ತೀವ್ರ ಚರ್ಚೆ ನಡೆಯುತ್ತಿದೆ. ಕಪ್ಪು ಈ ದೇಶದ ಮೂಲ ಬಣ್ಣ. ಕಪ್ಪು ಬಣ್ಣದ ದ್ರಾವಿಡರೇ ಮೂಲ ಭಾರತೀಯರು. ಅಂತಹ ದ್ರಾವಿಡರೆನಿಸಿಕೊಂಡಿರುವ ಶೋಷಿತ ಸಮುದಾಯಗಳು ಶಾಹು ಮಹಾರಾಜರು, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮಾ ಫುಲೆ ಅವರ ಆದರ್ಶಗಳನ್ನು ಅರಿತುಕೊಂಡು ಸ್ವಾಭಿಮಾನ, ಘನತೆಯ ಜೀವನ ನಡೆಸಬೇಕು” ಎಂದು ಕರೆ ಕೊಟ್ಟರು.

“ಬೆಳಗಾವಿ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶೇ. 45ಕ್ಕೂ ಅಧಿಕ ಸಂಖ್ಯೆಯಷ್ಟು ಎಸ್ಸಿ, ಎಸ್ಟಿ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಹೊರಗುಳಿಯುತ್ತಿದ್ದಾರೆ. ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಶೋಷಿತ ಸಮುದಾಯಗಳು ಮತ್ತೆ ಅನ್ಯಾಯದ ಚಕ್ರಕ್ಕೆ ಸಿಲುಕಬೇಕಾಗುತ್ತದೆ. ಭಾರತ ಬದಲಾಗುವುದು ದೇವಸ್ಥಾನ, ಚರ್ಚ್, ಮಸೀದಿಗಳಿಂದಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್ ಕೊಟ್ಟ ಮತದಾನದ ಹಕ್ಕಿನಿಂದ ಬದಲಾವಣೆ ಸಾಧ್ಯ. ಬಾಬಾ ಸಾಹೇಬರ ಲೇಖನಿಯಿಂದ ಭಾರತ ಬದಲಾಗಿದೆ” ಎಂದರು


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ