Breaking News

DON 3: ಮುಂದಿನ ಡಾನ್​ ಶಾರುಖ್​ ಅಲ್ಲ ರಣ್​ವೀರ್

Spread the love

DON 3. ಬಿಟೌನ್​ಲ್ಲಿ ಡಾನ್​ ಸದ್ದಾಗುತ್ತಿದೆ. ಆಗಸ್ಟ್ 8ರಂದು ಬಾಲಿವುಡ್​ನ ಸೆನ್ಸೇಶನಲ್​ ಸುದ್ದಿ ಅಂದ್ರೆ ಅದು ‘ಡಾನ್​​ 3’. ನಟ, ನಿರ್ದೇಶಕ, ನಿರ್ಮಾಪಕ ಮತ್ತು ಬಹುಮುಖ ಪ್ರತಿಭೆ ಫರ್ಹಾನ್​ ಅಖ್ತರ್ ಇಂದು ‘ಡಾನ್​​ 3’ ಸಿನಿಮಾ ಘೋಷಣೆ ಮಾಡಿದ್ದಾರೆ.

ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ಸಮಯದಿಂದ ಕಾದು ಕುಳಿತಿದ್ದರು. ಅಂತಿಮವಾಗಿ ‘ಡಾನ್​​ 3’ ಘೋಷಣೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು, ಡಾನ್​ 3 ಸಿನಿಪ್ರಿಯರ ಮೊಗದಲ್ಲಿ ಸಂತಸ ಮೂಡಿಸಿದೆ. ಆದ್ರೆ ಬಾಲಿವುಡ್​ ಕಿಂಗ್​ ಖಾನ್​ ಅವ್ರ ಕಟ್ಟಾ ಅಭಿಮಾನಿಗಳ ಹೃದಯ ಛಿದ್ರಗೊಳಿಸಿದೆ. ಏಕೆಂದರೆ ಡಾನ್​ 1 ಮತ್ತು ಡಾನ್​ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಎಸ್​ಆರ್​ಕೆ ಡಾನ್​ 3ರ ಭಾಗವಾಗುತ್ತಿಲ್ಲ. ರಾಕಿ ಔರ್​ ರಾಣಿ ಕಿ ಪ್ರೇಮ ಕಹಾನಿಯ ಯಶಸ್ಸಿನಲೆಯಲ್ಲಿ ತೇಲುತ್ತಿರುವ ರಣ್​ವೀರ್​ ಸಿಂಗ್​​ ಅವರನ್ನು ಬಾಲಿವುಡ್​ನ ಮುಂದಿನ ಡಾನ್​ ಆಗಿ ಸ್ವೀಕರಿಸಲಾಗಿದೆ.

ಮುಂದಿನ ಡಾನ್​ ರಣ್​ವೀರ್​ ಸಿಂಗ್​…: ನಿರ್ದೇಶಕ ಫರ್ಹಾನ್​ ಅಖ್ತರ್ ಅವರು ಸಿನಿಮಾದಲ್ಲಿ ಅಭಿನಯಿಸುವ ನಟ ನಟಿಯರ ಬಗ್ಗೆ ಮಾಹಿತಿ ನೀಡಿಲ್ಲ. ಸದ್ಯ ಸಿನಿಮಾವನ್ನು ಘೋಷಿಸಿದ್ದಾರಷ್ಟೇ. ಆದ್ರೆ ಅವರ ಸೋಷಿಯಲ್​ ಮಿಡಿಯಾ ಪೋಸ್ಟ್ ಪ್ರಕಾರ, ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಡಾನ್​ 3ರ ಭಾಗವಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿದೆ. ಇತ್ತ ನಟ ರಣ್​ವೀರ್​ ಸಿಂಗ್​ ಅವರ ಕಾಸ್ಟಿಂಗ್​ಗೂ ಅಂತಿಮ ಮುದ್ರೆ ಬಿದ್ದಿಲ್ಲ. ಆದ್ರೆ ಚಿತ್ರತಂಡದ ಮೂಲಗಳ ಪ್ರಕಾರ ನಟ ರಣ್​ವೀರ್​ ಸಿಂಗ್​ ಅವರೇ ಮುಂದಿನ ಡಾನ್​.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ