ನವದೆಹಲಿ: ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ಇನ್ನು ಎರಡು ತಿಂಗಳು ಮಾತ್ರ ಬಾಕಿ.
ಅಕ್ಟೋಬರ್ 5ರಿಂದ ಪ್ರಾರಂಭವಾಗುವ ಪಂದ್ಯಾವಳಿಗೆ ಸಪ್ಟೆಂಬರ್ 5ರೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ (ಐಸಿಸಿ) ಎಲ್ಲ ಕ್ರಿಕೆಟ್ ಮಂಡಳಿಗಳು ತಾತ್ಕಾಲಿಕ 15 ಆಟಗಾರರ ಪಟ್ಟಿ ಸಲ್ಲಿಸಬೇಕಿದೆ. ಸೆಪ್ಟಂಬರ್ 27ರೊಳಗೆ ಅಂತಿಮ ತಂಡ ಪ್ರಕಟಿಸಬೇಕು. ಆಸ್ಟ್ರೇಲಿಯಾ ಈಗಾಗಲೇ 18 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಭಾರತ ತಂಡದ ಆಯ್ಕೆಯಲ್ಲಿ ಹಲವು ಗೊಂದಲಗಳಿದ್ದು ಗಾಯದಿಂದ ಚೇತರಿಸಿಕೊಂಡು ಯಾರೆಲ್ಲಾ ಸ್ಥಾನ ಪಡೆಯುತ್ತಾರೆ, ಮಧ್ಯಮ ಕ್ರಮಾಂಕದಲ್ಲಿ ಯಾರು ಆಡ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಹೆಚ್ಚುವರಿ ವೇಗದ ಬೌಲರ್‌ಗಳಾಗಿ ಜಯದೇವ್ ಉನದ್ಕತ್ ಮತ್ತು ಶಾರ್ದೂಲ್ ಠಾಕೂರ್ ನಡುವೆಯೂ ಸ್ಪರ್ಧೆ ಇದೆ.
ಐಸಿಸಿ ನಿಯಮಗಳ ಪ್ರಕಾರ, 15 ಸದಸ್ಯರ ಆರಂಭಿಕ ತಂಡವನ್ನು ಸೆಪ್ಟೆಂಬರ್ 5ರೊಳಗೆ ನೀಡಬೇಕು. ಅಂತಿಮ ತಂಡದ ಪಟ್ಟಿ ಒಪ್ಪಿಸಲು ಸೆಪ್ಟೆಂಬರ್ 27ರ ಗಡುವು ನೀಡಲಾಗಿದೆ. ಎರಡೂ ತಂಡಗಳಲ್ಲಿ ಬದಲಾವಣೆಗೆ ಅವಕಾಶವಿದೆ.
ಭಾರತಕ್ಕೆ ವಿಶ್ವಕಪ್ಗೂ ಮುನ್ನ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಇದೆ. ಆಸಿಸ್ ವಿರುದ್ಧದ ಪಂದ್ಯ ಸಪ್ಟೆಂಬರ್ 27 ರಂದು ಮುಕ್ತಾಯವಾಗಲಿದೆ. ಹೀಗಿರುವಾಗ ಭಾರತಕ್ಕೆ ತಂಡವನ್ನು ಅಂತಿಮಗೊಳಿಸುವುದು ಸವಾಲಾಗಲಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಗೆ 16ರಿಂದ 18ರ ತಂಡವನ್ನು ಪ್ರಕಟಿಸಿ ಪ್ರಯೋಗ ನಡೆಸಿದರೆ ಅಚ್ಚರಿಯಿಲ್ಲ. ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಯಲ್ಲಿ ಉನದ್ಕತ್ ಮತ್ತು ಶಾರ್ದೂಲ್ ಅವಕಾಶ ಪಡೆಯುವುದು ಬಹುತೇಕ ಖಚಿತವಾಗಿದೆ.
ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಮೊದಲ ವಿಶ್ವಕಪ್ ಪಂದ್ಯ ಆಡಲಿದೆ. ಆದರೆ ಇದುವರೆಗೂ ಸೂಕ್ತ ಆಟಗಾರರ ಆಯ್ಕೆ ನಡೆದಿಲ್ಲ. ಗಾಯಗೊಂಡಿರುವ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಲಭ್ಯತೆ ಪ್ರಶ್ನೆಯೇ ಆಗಿದೆ. ಇದರ ಜೊತೆಗೆ ಭಾರತದ ಪಿಚ್ನಲ್ಲಿ ಬೌಲಿಂಗ್ ಸಂಯೋಜನೆಯೂ ಮೆನ್ ಇನ್ ಬ್ಲೂಗೆ ಕಠಿಣವಾಗುತ್ತಿದೆ.ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಮುಖೇಶ್ ಕುಮಾರ್, ಯುಜ್ವೇಂದ್ರ ಚಾಹಲ್