Breaking News

ನಾನು ಹೋಮದಲ್ಲಿ ಭಾಗಿಯಾಗಿದ್ದು ನನಗೆ ಸಮಸ್ಯೆ ಇಲ್ಲ ಅಂದ್ಮೇಲೆ ನಿಮಗೇಕೆ?- ಪ್ರಕಾಶ್ ರಾಜ್

Spread the love

ಶಿವಮೊಗ್ಗ: “ದೇಹಕ್ಕಾದ ಗಾಯ ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ದೇಶಕ್ಕೆ, ಸಮಾಜಕ್ಕಾದ ಗಾಯ ಸುಮ್ಮನಿದ್ದಷ್ಟು ಹೆಚ್ಚುತ್ತದೆ” ಎಂದು ನಟ ಪ್ರಕಾಶ್ ರಾಜ್ ಹೇಳಿದರು. ನಗರದ ಖಾಸಗಿ ಹೋಟೆಲ್​ನಲ್ಲಿಂದು ನಡೆದ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ ಅವರು, “ಮಾನವೀಯತೆಯನ್ನು ತುಳಿಯುವರ ವಿರುದ್ಧ ನಾವು ನಿಲ್ಲುತ್ತಿದ್ದೇವೆ. ನಮಗೆ ದ್ವೇಷ ಬೇಕಿಲ್ಲ, ನಮಗೆ ಬೇಕಿರುವುದು ಪ್ರೀತಿ. ಎಲ್ಲರಲ್ಲೂ ಸಮಾನತೆ ಇರಬೇಕು. ನಮ್ಮ ಕ್ರೌರ್ಯ, ವಿರೋಧಗಳು ದೇಶ ಹಾಳಾಗಲು ಕಾರಣವಾಗುತ್ತವೆ” ಎಂದು ಕಳವಳ ವ್ಯಕ್ತಪಡಿಸಿದರು.

ಪಠ್ಯ ಪರಿಷ್ಕರಣೆ ವಿಚಾರದ ಕುರಿತು ನಿಮ್ಮ ಅಭಿಪ್ರಾಯವೇನು?: “ಪಠ್ಯಪುಸ್ತಕಗಳ ಬದಲಾವಣೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಭೂಮಿ ಮೇಲೆ ವಿಷಾನಿಲಗಳನ್ನು ಹಾಕುವ ಹಾಗೆ ಏನೇನೋ ಹಾಕಿದಾಗ ನಾವು ಅದನ್ನು ಪ್ರಶ್ನಿಸಬೇಕು. ನಮ್ಮ ಮಕ್ಕಳ ಜೀವನದಲ್ಲಿ ಯಾರು ಆಟ ಆಡುತ್ತಿದ್ದಾರೆ ಎನ್ನುವುದನ್ನು ಯೋಚನೆ ಮಾಡಬೇಕಾಗಿರುವುದು ನಾವೇ. ರಾಜಕೀಯದಲ್ಲಿರುವ ವ್ಯಕ್ತಿಗಳು ಹೀಗೆ ಪಠ್ಯಪುಸ್ತಕಗಳನ್ನು ತಿರುಚಿದಾಗ ನಾವು ಎಚ್ಚೆತ್ತುಕೊಳ್ಳಬೇಕು” ಎಂದರು.

“ಕಾಲೇಜುಗಳಲ್ಲಿ ಕೇಸರಿ ಬಣ್ಣ ಬಳಿಯುತ್ತೇವೆ ಎಂದರೆ ಅದು ತಪ್ಪಲ್ಲವೇ?” ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು. “ಜೀವನದಲ್ಲಿ ನಾನು ಎಂದೂ ಧರ್ಮದ ಬಗ್ಗೆ ಮಾತೇ ಆಡಿಲ್ಲ. ಇಂಥ ಹೇಳಿಕೆಗಳನ್ನು ನೀಡಿದಾಗ ನನ್ನನ್ನು ಧರ್ಮವಿರೋಧಿ ಎನ್ನುತ್ತಾರೆ. ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷ ಧರ್ಮ ಅಲ್ಲ, ಧರ್ಮ ನನ್ನದು. ರಾಜಕೀಯ ವ್ಯಕ್ತಿಗಳ ಕೆಲಸ ಆಡಳಿತ ನಡೆಸುವುದು, ಬಡವರಿಗೆ ಸೌಲಭ್ಯ, ಯುವಕರಿಗೆ ಉದ್ಯೋಗ ನೀಡುವುದು” ಎಂದು ಹೇಳಿದರು.

 


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ