ಬೆಂಗಳೂರು, ನ.1- ನ್ಯಾಯಯುತವಾಗಿ ನೀಡಬೇಕಾದ ತೆರಿಗೆ ಪಾಲನ್ನು ಕೇಂದ್ರ ನೀಡದೆ ವಂಚಿಸುತ್ತಿರುವುದರಿಂದ ನಮ್ಮಂತಹ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿವೆ. ಅನುದಾನವಿಲ್ಲದೆ ಮೂಲಸೌಕರ್ಯ ಕಲ್ಪಿಸಲಾಗಿದೆ. ರಾಜ್ಯಕ್ಕೆ ಹರಿದುಬರಬೇಕಾದ ಬಂಡವಾಳ ಹೂಡಿಕೆ ಸಮರ್ಪಕವಾಗಿ ಬರದಿದ್ದರೆ ಉದ್ಯೋಗ ಸೃಷ್ಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯವು ಅಭಿವೃದ್ಧಿ ಹೊಂದಬೇಕಾದಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗುವುದಿಲ್ಲ. ಕರ್ನಾಟಕವು ಮುಂದಿನ ದಿನಗಳಲ್ಲಿ ಹಿಂದುಳಿದ ಅಥವಾ ಬಡ ರಾಜ್ಯಗಳ ಸಾಲಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯವನ್ನು ವ್ಯವಸ್ಥಿತವಾಗಿ ನಾಶ ಮಾಡುವ ಎಲ್ಲ ರೀತಿಯ ಹುನ್ನಾರಗಳನ್ನೂ ಮಾಡುತ್ತಿದೆ. ಇಷ್ಟಾದರೂ ಜನರು ಅರ್ಥ ಮಾಡಿಕೊಳ್ಳಲಿಲ್ಲ ಎಂದರು.