Breaking News

ಮೂರು ಜಿಲ್ಲೆಗಳಾದ ತುಮಕೂರು, ಯಾದಗಿರಿ ಹಾಗೂ ಚಿತ್ರದುರ್ಗ ಶಾಸಕರು ಹಾಗೂ ಸಚಿವರ ಸಭೆ ಅಸಮಾಧಾನಕ್ಕೆ ಸಿಎಂ ಮದ್ದು

Spread the love

ಬೆಂಗಳೂರು: ಮೂರು ಜಿಲ್ಲೆಗಳಾದ ತುಮಕೂರು, ಯಾದಗಿರಿ ಹಾಗೂ ಚಿತ್ರದುರ್ಗ ಶಾಸಕರು ಹಾಗೂ ಸಚಿವರ ಸಭೆ ಮುಕ್ತಾಯವಾಗಿದೆ.

ಈ ವೇಳೆ ಶಾಸಕರು ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗ ಜಿಲ್ಲೆಗಳ ಕ್ಷೇತ್ರವಾರು ಸಮಸ್ಯೆ, ಅನುದಾನ, ಅಭಿವೃದ್ಧಿ ಸಂಬಂಧ ಸಭೆ ನಡೆಯಿತು. ಮೊದಲಿಗೆ ತುಮಕೂರು ಜಿಲ್ಲೆಯ ಸಚಿವರು, ಶಾಸಕರ ಜೊತೆ ಸಭೆ ನಡೆಸಿದರು.

ಸಭೆಯ ಬಳಿಕ ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ”ಇದು ವಿನೂತನ ಪ್ರಯತ್ನ. ನಮ್ಮ ನಮ್ಮ ತಾಲ್ಲೂಕುಗಳ ಸಮಸ್ಯೆ, ಅನುದಾನ, ಚುನಾವಣಾ ಭರವಸೆಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಸಿಎಂ ಗಮನಕ್ಕೆ ತರಲಾಯಿತು. ಫಲಪ್ರದವಾಗಿ ಸಭೆ ಮುಗಿದಿದೆ‌. ನನಗೆ ಸಂತೋಷವಾಗಿದೆ” ಎಂದರು. “ಸಚಿವರಿಗೆ ಅವರ ಇಲಾಖೆ ಬಗ್ಗೆ ತಿಳಿಯಲು ಸ್ವಲ್ಪ ಸಮಯ ಬೇಕು. ಸಚಿವರು ಕೂಡಾ ಸಭೆಯಲ್ಲಿ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಡಿಸಿಎಂ ಡಿಕೆಶಿ ಕೂಡ ಸಚಿವರಿಗೆ ಕೆಲವು ಸಂದೇಶ ನೀಡಿದ್ದಾರೆ. ಸಿಎಂ ಕೂಡ ಸಚಿವರಿಗೆ ಬಹಳಷ್ಟು ಸಂದೇಶ ರವಾನಿಸಿದ್ದಾರೆ. ಸಚಿವರ ಜೊತೆಗೆ ಸಮಸ್ಯೆ ದೊಡ್ಡದೇನಲ್ಲ” ಎಂದು ಹೇಳಿದರು.

ಅನುದಾನ ಕೊರತೆ ಇಲ್ಲ: ”ಕ್ಷೇತ್ರಗಳ ಅಭಿವೃದ್ಧಿಗೆ ನಮ್ಮ ಮೊದಲ ಆದ್ಯತೆ. ವಿವಿಧ ಶಾಸಕರು ಅನೇಕ ದೂರುಗಳನ್ನು ನೀಡಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆಯಲಿದೆ ಎಂಬ ಆಶಾಭಾವನೆ ಇದೆ. ಅನುದಾನ ಕೊರತೆ ಇಲ್ಲ. ನಾವು ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಿದ್ದೇವೆ” ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಸಚಿವ ಚಲುವರಾಯ ಸ್ವಾಮಿ ಮೇಲಿನ ದೂರು ವಿಚಾರವಾಗಿ ಪ್ರತಿಕ್ರಿಯಿಸಿ, “ಆ ಪತ್ರ ಅಸಲಿಯೋ, ನಕಲಿಯೋ ಎಂಬುದನ್ನು ಪರಿಶೀಲಿಸಬೇಕಾಗಿದೆ. ಬಳಿಕ ಕ್ರಮ ತೆಗೆದುಕೊಳ್ಳಬಹುದು” ಎಂದು ತಿಳಿಸಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ