Home / ರಾಜಕೀಯ / 40% ಕಮಿಷನ್ ಆರೋಪ ಮಾಡ್ತಿದ್ದ ಕೆಂಪಣ್ಣ ಯಾವ ಮೂಲೆಯಲ್ಲಿದ್ದಾರೆ?: ಗೋವಿಂದ ಕಾರಜೋಳ

40% ಕಮಿಷನ್ ಆರೋಪ ಮಾಡ್ತಿದ್ದ ಕೆಂಪಣ್ಣ ಯಾವ ಮೂಲೆಯಲ್ಲಿದ್ದಾರೆ?: ಗೋವಿಂದ ಕಾರಜೋಳ

Spread the love

ಬಾಗಲಕೋಟೆ : “ಬಿಜೆಪಿ ಸರ್ಕಾರದ ವಿರುದ್ದ 40% ಕಮಿಷನ್ ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗ ಯಾವ ಮೂಲೆಯಲ್ಲಿ ಇದ್ದಾರೆ?

ಕೆಂಪಣ್ಣನನ್ನು ಬ್ಯಾಟರಿ ಹಿಡಿದು ಹುಡಕಬೇಕಿದೆ” ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತ‌ಪಡಿಸಿದ್ದಾರೆ.

ಬಾಗಲಕೋಟೆ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳಾಗಿದ್ದು, ಒಂದು ಅಭಿವೃದ್ದಿ ಕಾಮಗಾರಿಯೂ ಶುರುವಾಗಿಲ್ಲ. ದಯವಿಟ್ಟು ಅಭಿವೃದ್ದಿ ಕೆಲಸ ನಿಲ್ಲಿಸಬೇಡಿ. ನಿಮ್ಮ ಸರ್ಕಾರ ಆರ್ಥಿಕ‌ ದಿವಾಳಿ ಆಗಿದ್ದರೆ, ಹೊಸ ಅಭಿವೃದ್ದಿ ಕೆಲಸಗಳನ್ನು ಮಾಡಲು ನಿಮಗೆ ಶಕ್ತಿ ಇಲ್ಲದಿದ್ದರೆ, ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳನ್ನು ಬಂದ್​ ಮಾಡಿ ಕಮಿಷನ್​ ಕೇಳಬೇಡಿ ಎಂದು ವಾಗ್ದಾಳಿ ನಡೆಸಿದರು.

ಹಿಂದೆ ನೀವೇ ನಮ್ಮ ಸರ್ಕಾರದ ಮೇಲೆ ಆಧಾರ ಇಲ್ಲದೇ ಸುಳ್ಳು ಆರೋಪ ಮಾಡಿದ್ದೀರಿ. ಇವತ್ತು ಏನಾಗಿದೆ? ಗುತ್ತಿಗೆದಾರರಿಗೆ ಒಂದು ರೂ. ಬಿಲ್ ಕೊಟ್ಟಿಲ್ಲ. ಕೆಂಪಣ್ಣ ಈಗ ಎಲ್ಲಿದ್ದಾನೆ.? ಬ್ಯಾಟರಿ ಹಿಡಿದು ಹುಡುಕಬೇಕು. ಸಿದ್ದರಾಮಯ್ಯನ ಮನೆ ಮೂಲ್ಯಾಗ ಅದಾನೋ.? ಡಿ.ಕೆ.ಶಿವಕುಮಾರ್​ ಮನೆ ಮೂಲ್ಯಾಗ ಇದ್ದಾನೋ.? ಅವರ ಮನೆಯಲ್ಲಿ ಕುಳಿತು ಅರ್ಜಿ ಬರೆದು 40% ಕಮಿಷನ್ ಆರೋಪ ಮಾಡಿದ್ದನಲ್ಲ. ಇವತ್ತಿಗೂ ಒಂದೇ ಒಂದು ಆರೋಪ ಸಾಬೀತು ಮಾಡಲು ಆಗಿಲ್ಲ. ಗುತ್ತಿಗೆದಾರರ ಪರವಾಗಿ ಧ್ವನಿ ಎತ್ತುತ್ತಿಲ್ಲ. 6% ವರ್ಗಾವಣೆ ಎಂದು 54% ವರ್ಗಾವಣೆ ಮಾಡುತ್ತಿದ್ದಾರೆ ಎಂದು ಕಾರಜೋಳ ಕಿಡಿಕಾರಿದರು.

ಬಿಜೆಪಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡುವ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಆಗಲೂ ಶಾಸಕರು ಅವಿಶ್ವಾಸದಿಂದ ಹೊರಬಂದರು. ಹಾಲು ಕುಡಿದು ಸಾಯೋರಿಗೆ ವಿಷ ಕೊಟ್ಟು ಸಾಯಿಸೋದು ಬೇಕಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟರು. ಒಳಮೀಸಲಾತಿಯಿಂದ ಬಿಜೆಪಿ ಪಕ್ಷ ಸೋತಿರುವ ಬಗೆಗಿನ ಆರೋಪದ ಬಗ್ಗೆ, ಅದು ಅವರ ಭ್ರಮೆ. ತಪ್ಪು ‌ಲೆಕ್ಕಾಚಾರದಿಂದ ನಾವು ಸೋತಿದ್ದೇವೆ. 72 ಹೊಸ ಮುಖಗಳನ್ನು ಜನ ಒಪ್ಪಲಿಲ್ಲ.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ