Breaking News
Home / ರಾಜಕೀಯ / ಕಲಚೇತನರ ಸಿಟ್ಟಿಂಗ್​ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ, ಪುರುಷ ತಂಡಗಳ ಗೆಲುವು

ಕಲಚೇತನರ ಸಿಟ್ಟಿಂಗ್​ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ, ಪುರುಷ ತಂಡಗಳ ಗೆಲುವು

Spread the love

ಹಾವೇರಿ : ಮಲೇಶಿಯಾದ ಕ್ವಾಲಾಲಂಪುರದಲ್ಲಿ ಜುಲೈ 29 ಮತ್ತು 30 ರಂದು ನಡೆದ ವಿಕಲಚೇತನರ ಸಿಟ್ಟಿಂಗ್​ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಮತ್ತು ಪುರುಷ ತಂಡಗಳು ಗೆಲ್ಲುವ ಮೂಲಕ ಚಿನ್ನದ ಪದಕ ಬೇಟೆಯಾಡಿದ್ದಾರೆ. ಈ ಇಬ್ಬರು ಆಟಗಾರರು ಹಾವೇರಿ ಜಿಲ್ಲೆಯವರಾಗಿದ್ದು, ಮಹಿಳಾ ತಂಡವನ್ನು ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದ ಮಂಜುಳಾ ಲಮಾಣಿ ಹಾಗು ಪುರುಷ ತಂಡವನ್ನು ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಹರೀಶ್ ಶಿವಣ್ಣನವರ್ ಮುನ್ನಡಿಸಿದ್ದರು.

ಮುಂಬರುವ ಪ್ಯಾರಾ ಏಷ್ಯನ್​ ಗೇಮ್ಸ್ ಹಿನ್ನೆಲೆ ಸಿಟ್ಟಿಂಗ್​ ಥ್ರೋಬಾಲ್ ಕ್ರೀಡೆಯನ್ನು ಪರಿಚಯಸಲು ಮಲೇಷ್ಯಾ ವಿಕಲಚೇತನರ ವಾಲಿಬಾಲ್ ಅಸೋಸಿಯೇಷನ್ ಮತ್ತು ಪ್ಯಾರಾ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ಈ ಪಂದ್ಯಗಳನ್ನು ಆಯೋಜಿಸಿದ್ದು, ಮಲೇಷ್ಯಾ-ಭಾರತ ಪ್ಯಾರಾ ತ್ರೋಬಾಲ್ ತರಬೇತಿ ಕಾರ್ಯಾಗಾರ ಹಾಗು ಜುಲೈ 29 ಮತ್ತು 30 ಎರಡು ದೇಶಗಳ ನಡುವೆ ಸಿಟ್ಟಿಂಗ್​ ಥ್ರೋಬಾಲ್ ಸರಣಿಯ 5 ಪಂದ್ಯಗಳನ್ನು ಏರ್ಪಡಿಸಲಾಗಿತ್ತು. ಈ ಪಂದ್ಯಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಭಾರತದ ಆಟಗಾರರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಕ್ರೀಡಾಕೂಟ ಮತ್ತು ಕಾರ್ಯಾಗಾರದಲ್ಲಿ ಮಲೇಷಿಯನ್ ಸಿಟಿಂಗ್ ವಾಲಿಬಾಲ್ ಆಟಗಾರರು ಪಾಲ್ಗೊಂಡಿದ್ದರು.

ಕಾರ್ಯಾಗಾರದಲ್ಲಿ ಪ್ಯಾರಾ ಥ್ರೋಬಾಲ್, ಪ್ರಾಯೋಗಿಕ ಆಟಗಳು, ಸಿಮುಲೇಶನ್ ಪಂದ್ಯಗಳು ಮತ್ತು ಸ್ಪರ್ಧಾತ್ಮಕ ಪಂದ್ಯಗಳ ಪರಿಚಯವನ್ನು ಪ್ಯಾರಾಲಿಂಪಿಕ್ ಕೌನ್ಸಿಲ್ ಆಫ್ ಮಲೇಷ್ಯಾ ಮಾಡಿಸಿತು. ಈ ಕ್ರೀಡೆಯಲ್ಲಿ ಭಾರತದ ಪುರುಷ ತಂಡವು ಮಲೇಷ್ಯಾದ ಪುರುಷ ತಂಡದ ವಿರುದ್ದ ಅಧಿಕ 4 ಅಂಕ ಗಳಿಸುವ ಮೂಲಕ ವಿಜಯಮಾಲೆಯನ್ನು ತನ್ನದಾಗಿಸಿಕೊಂಡಿದೆ. ಅದೇ ರೀತಿ ಭಾರತದ ಮಹಿಳಾ ತಂಡವು ಮೂರು ಅಂಕಗಳನ್ನು ಅಧಿಕವಾಗಿ ಪಡೆಯುವ ಮೂಲಕ ಗೆಲುವು ಸಾಧಿಸಿದೆ. ಇನ್ನೊಂದೆಡೆ ಸಿಟ್ಟಿಂಗ್​ ಥ್ರೋಬಾಲ್ ಕ್ರೀಡೆಗೆ ಆಯ್ಕೆಯಾದ ಬಹುತೇಕ ಆಟಗಾರರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ವೀಸಾ, ಪಾಸಪೋರ್ಟ್ ಸೇರಿದಂತೆ ವಿವಿಧ ಕಾರಣಗಳಿಗಾಗಿ ಖರ್ಚು ಭರಿಸಲು ಸಾಧ್ಯವಾಗದೆ ಪರದಾಟ ನಡೆಸುತ್ತಿದ್ದಾರೆ. ಈ ಕ್ರೀಡೆ ಸರ್ಕಾರದ ಮಾನ್ಯತೆ ಪಡೆಯದ ಕಾರಣ ಸರ್ಕಾರಗಳಿಂದ ಸಹ ಹೆಚ್ಚು ನೆರವು ಸಿಗುತ್ತಿಲ್ಲಾ ಎನ್ನುತ್ತಾರೆ ಕ್ರೀಡಾಪಟುಗಳು.

 


Spread the love

About Laxminews 24x7

Check Also

ಬೈಲಹೊಂಗಲದಲ್ಲಿ ಇದ್ದಾರೆ ‘ಹತ್ತು ರೂಪಾಯಿ’ ಡಾಕ್ಟ್ರು

Spread the love ಬೈಲಹೊಂಗಲ: ಇದು ದುಬಾರಿ ಯುಗ. ಇಂದು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕ ಜನರ ಕೈಸುಡುತ್ತಿದೆ. ಆದರೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ