Breaking News
Home / ರಾಜಕೀಯ / ಖಾಸಗಿ ಕಂಪೆನಿಯ ಕ್ರಿಮಿನಾಶಕ ಸಿಂಪಡಣೆಯಿಂದ ರೈತರೊಬ್ಬರ ಟೊಮೆಟೊ ಬೆಳೆ ಸಂಪೂರ್ಣ ನಾಶ

ಖಾಸಗಿ ಕಂಪೆನಿಯ ಕ್ರಿಮಿನಾಶಕ ಸಿಂಪಡಣೆಯಿಂದ ರೈತರೊಬ್ಬರ ಟೊಮೆಟೊ ಬೆಳೆ ಸಂಪೂರ್ಣ ನಾಶ

Spread the love

ದೊಡ್ಡಬಳ್ಳಾಪುರ : ಟೊಮೆಟೊಗೆ ಇವತ್ತು ಚಿನ್ನದ ಬೆಲೆ.

ಉತ್ತಮ ಬೆಲೆ ಸಿಗುವ ಸಮಯಕ್ಕೆ ಟೊಮೆಟೊ ಬೆಳೆಯ ಭರ್ಜರಿ ಫಸಲು ಬಂದಿತ್ತು. ಆದರೆ, ಕಂಪನಿಯೊಂದರ ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿದ್ದರಿಂದ ತಾಲೂಕಿನಲ್ಲಿ ಇಡೀ ಟೊಮೆಟೊ ಬೆಳೆ ಒಣಗಿನಿಂತಿದೆ ಎಂದು ರೈತರು ಆರೋಪಿಸಿದ್ದಾರೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಅಡುಗೆ ಮನೆಯ ರಾಣಿ, ಕೆಂಪು ಸುಂದರಿ ಎಂದೇ ಟೊಮೆಟೊ ಪ್ರಸಿದ್ಧಿ ಪಡೆದಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಗೆ ಬಂಗಾರದ ಬೆಲೆ ಇದೆ. ಇವತ್ತು ಟೊಮೆಟೊ ಬೆಳೆದವನೇ ಸಿರಿವಂತ ಅನ್ನುವ ಮಾತುಗಳು ಸಹ ಶುರುವಾಗಿವೆ. ಆದರೆ, ತಾಲೂಕಿನಲ್ಲಿ ರೈತರೊಬ್ಬರು ಟೊಮೆಟೊ ಬೆಳೆದ್ರು ಸಹ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಗಿಡ್ಡೇಗೌಡ ನಷ್ಟ ಅನುಭವಿಸಿದ ರೈತ. ಈ ಕುರಿತು ಮಾತನಾಡಿರುವ ಅವರು, ”ಒಂದು ಎಕರೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದೇವೆ. ಹುಲುಸಾಗಿ ಬೆಳೆದಿದ್ದ ಟೊಮೆಟೊ ಹೂಬಿಟ್ಟು ಫಸಲು ಕೊಡಲು ಪ್ರಾರಂಭಿಸಿತ್ತು. ಆದರೆ ಇದೇ ಸಮಯಕ್ಕೆ ಖಾಸಗಿ ಕಂಪನಿಯ ಕ್ರಿಮಿನಾಶಕ ಔಷಧಿಯ ಪ್ರತಿನಿಧಿ ನಮ್ಮನ್ನು ಭೇಟಿ ಮಾಡಿ, ಉಚಿತವಾಗಿ ಕ್ರಿಮಿನಾಶಕ ಔಷಧಿ ಕೊಡುತ್ತೇವೆ. ಗಿಡಗಳಿಗೆ ಸಿಂಪಡಣೆ ಮಾಡಿ ಭರ್ಜರಿ ಫಸಲು ಬರುತ್ತೆ ಹೇಳಿದ್ದರು. ಈಗ ಎಲ್ಲವೂ ಹಾಳಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

 


Spread the love

About Laxminews 24x7

Check Also

ಬೈಲಹೊಂಗಲದಲ್ಲಿ ಇದ್ದಾರೆ ‘ಹತ್ತು ರೂಪಾಯಿ’ ಡಾಕ್ಟ್ರು

Spread the love ಬೈಲಹೊಂಗಲ: ಇದು ದುಬಾರಿ ಯುಗ. ಇಂದು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕ ಜನರ ಕೈಸುಡುತ್ತಿದೆ. ಆದರೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ