Breaking News

ಕಳೆದ ಎರಡು ತಿಂಗಳಿನಿಂದ ಗೌರವ ವೇತನ ಇಲ್ಲದೇ ಅತಿಥಿ ಉಪನ್ಯಾಸಕರು ಸಮಸ್ಯೆ ಎದುರಿಸುವಂತಾಗಿದ್ದು, ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಸುರೇಶ್​ ಕುಮಾರ್​ ಪತ್ರ ಬರೆದಿದ್ದಾರೆ.

Spread the love

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಳೆದ ಎರಡೂವರೆ ತಿಂಗಳಿನಿಂದ ಗೌರವ ವೇತನ ಬಿಡುಗಡೆಯಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಬಾಕಿ ಉಳಿಸಿಕೊಂಡಿರುವ ಗೌರವ ವೇತನ ಬಿಡುಗಡೆ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್​ಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

 

 ಮಾಜಿ ಸಚಿವರು ಬರೆದ ಪತ್ರರಾಜ್ಯದ 436 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14 ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಬರುವ ಗೌರವ ವೇತನದ ಪ್ರಮಾಣ ಎಷ್ಟು ಕನಿಷ್ಠ ಎಂಬುದು ತಮಗೂ ಚೆನ್ನಾಗಿ ತಿಳಿದಿದೆ. ಇಷ್ಟು ಕಡಿಮೆ ವೇತನ ಪಡೆಯುತ್ತಿರುವ ಈ ಅತಿಥಿ ಉಪನ್ಯಾಸಕರಿಗೆ ಕಳೆದ ಮೇ ತಿಂಗಳು (16 ರಿಂದ), ಜೂನ್ ಹಾಗೂ ಜುಲೈ ಹೀಗೆ ಕಳೆದ ಎರಡೂವರೆ ತಿಂಗಳುಗಳಿಂದ ಗೌರವ ವೇತನ ದೊರೆತಿಲ್ಲ.

ಮಕ್ಕಳ ಶಾಲಾ ಶುಲ್ಕ, ದಿನನಿತ್ಯದ ಖರ್ಚು, ಮನೆ ಬಾಡಿಗೆ, ಒಂದೊಮ್ಮೆ ಮನೆಯಲ್ಲಿ ಯಾರಾದರೂ ಆರೋಗ್ಯ ಕೆಟ್ಟರೆ ಆಸ್ಪತ್ರೆಗೆ ತಗಲುವ ವೆಚ್ಚ. ಇವುಗಳನ್ನೆಲ್ಲಾ ಯಾವುದೇ ಒಂದು ಕುಟುಂಬ ಭರಿಸಲೇಬೇಕು. ಇವರುಗಳ ಕುಟುಂಬ ನಿರ್ವಹಣೆ ಯಾವ ರೀತಿ ಇರಬಹುದು ಎಂದು ಒಮ್ಮೆ ಯೋಚಿಸಿದರೆ ಬಹಳ ಬೇಸರವಾಗುತ್ತದೆ ಎಂದು ಪತ್ರದ ಮೂಲಕ ಅತಿಥಿ ಉಪನ್ಯಾಸಕರ ಕಷ್ಟವನ್ನು ವಿವರಿಸಿದ್ದಾರೆ.

ನಿಜಕ್ಕೂ ಸಂಕಷ್ಟದಲ್ಲಿರುವ ಈ ಅತಿಥಿ ಉಪನ್ಯಾಸಕರಿಗೆ ಕೂಡಲೇ ವೇತನ ದೊರೆಯುವಂತೆ ತಾವು ಕ್ರಮವಹಿಸಬೇಕೆಂದು ಕೋರುತ್ತೇನೆ ಎಂದು ಪತ್ರದ ಮೂಲಕ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್​ಗೆ ಮಾಜಿ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸೇವಾ ಭದ್ರತೆ, ಕನಿಷ್ಠ ವೇತನ ನಿಗದಿ ಸೇರಿ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ಫ್ರೀಡಂ ಪಾರ್ಕ್​ನಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದರು. ಸರ್ಕಾರ ತಮಗೆ ಬೇಕಾದ ಸಂದರ್ಭದಲ್ಲಿ ನೇಮಕ ಮಾಡಿಕೊಂಡು ಆರ್ಥಿಕ ವರ್ಷ ಮುಗಿಯುತ್ತಿದ್ದಂತೆ ಕರ್ತವ್ಯದಿಂದ ಬಿಡುಗಡೆ ಮಾಡುತ್ತಿದೆ. ಕೇವಲ 8-10 ತಿಂಗಳ ಬಳಿಕ ಪುನಃ ಬೇರೆಡೆ ಕೆಲಸಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸರ್ಕಾರ ಈ ಧೋರಣೆ ಕೈಬಿಡಬೇಕು ಎಂದು ಅತಿಥಿ ಶಿಕ್ಷಕರು ಆಗ್ರಹಿಸಿದ್ದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ