Breaking News

ಸಿಜೆಐ ವಿರುದ್ಧದ ಟೀಕೆ ವಿಚಾರ: ಪ್ರಕಾಶಕ ಬದ್ರಿ ಶೇಷಾದ್ರಿಗೆ ಜಾಮೀನು

Spread the love

ಚೆನ್ನೈ(ತಮಿಳುನಾಡು): ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಬಂಧಿತರಾಗಿದ್ದ ಪ್ರಕಾಶಕ ಮತ್ತು ಬಲಪಂಥೀಯ ವ್ಯಾಖ್ಯಾನಕಾರ ಬದ್ರಿ ಶೇಷಾದ್ರಿ ಅವರಿಗೆ ಪೆರಂಬಲೂರು ಜಿಲ್ಲೆಯ ಕುನ್ನಂನಲ್ಲಿರುವ ಜಿಲ್ಲಾ ಮುನ್ಸಿಫ್ ಕಮ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

 

ಶೇಷಾದ್ರಿ ಅವರನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೋರಿ ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಅರ್ಜಿಯನ್ನು ವಜಾಗೊಳಿಸಿದ ಜಿಲ್ಲಾ ಮುನ್ಸಿಫ್ ಕಮ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಸ್. ಕವಿತಾ ಅವರು ಪ್ರಕಾಶಕರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ವಕೀಲ ಕವಿಯರಸು ನೀಡಿದ ದೂರಿನ ಮೇರೆಗೆ ಕಾ ಬದ್ರಿ ಶೇಷಾದ್ರಿ ಅವರನ್ನು ಕುನ್ನಂ ಪೊಲೀಸರು ಜು.29 ರಂದು ಚೆನ್ನೈನಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದರು.

ಕುನ್ನಂ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ (ಸೆಕ್ಷನ್ 153 ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು, 153-ಎ-ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು 505-ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾದ ಹೇಳಿಕೆಗಳು) ಬಂಧಿಸಿತ್ತು. ಬಂಧನದ ನಂತರ ಅವರನ್ನು ತಿರುಚ್ಚಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಸದ್ಯ ಜಾಮೀನು ಮಂಜೂರು ಮಾಡಿದ ನ್ಯಾಯಾಲಯವು 15 ದಿನಗಳ ಕಾಲ ತಿರುಚ್ಚಿಯಲ್ಲೇ ಇರಲು ಮತ್ತು ಶ್ರೀರಂಗಂ ಪೊಲೀಸ್ ಠಾಣೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಸಹಿ ಮಾಡುವಂತೆ ಸೂಚಿಸಿದೆ.

ಶೇಷಾದ್ರಿ ಅವರನ್ನು ಬೆಂಬಲಿಸಲು ಬಿಜೆಪಿ ಕಾರ್ಯಕರ್ತರು ಚೆನ್ನೈನಿಂದ ಸುಮಾರು 285 ಕಿ.ಮೀ ದೂರದಲ್ಲಿರುವ ಕುನ್ನಂನಲ್ಲಿರುವ ನ್ಯಾಯಾಲಯದಲ್ಲಿ ಜಮಾಯಿಸಿದ್ದರು. ಇದಕ್ಕೂ ಮೊದಲು ಬದ್ರಿ ಶೇಷಾದ್ರಿ ಅವರ ಬಂಧನವು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ನಿರೀಕ್ಷೆಯಂತೆ ಬಿಜೆಪಿ ಡಿಎಂಕೆ ಸರ್ಕಾರವನ್ನು ಟೀಕಿಸಿತ್ತು.


Spread the love

About Laxminews 24x7

Check Also

ಅಕ್ರಮ ಬೆಟ್ಟಿಂಗ್​ ಆರೋಪದಲ್ಲಿ ಬಂಧಿತನಾದ ಶಾಸಕ ವೀರೇಂದ್ರ ಪ್ರಕರಣದ ದಾಖಲೆ ಕೇಳಿ ಇಡಿ ಸಮನ್ಸ್​: ಅನಿಲ್ ಗೌಡ ಸಲ್ಲಿಸಿದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಬೆಂಗಳೂರು : ಅಕ್ರಮ ಬೆಟ್ಟಿಂಗ್​ ಆರೋಪದಲ್ಲಿ ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಕರಣದಲ್ಲಿ ಕೆಲ ದಾಖಲೆ ಒದಗಿಸುವಂತೆ ಇ.ಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ