ಕಾಗವಾಡ ತಾಲೂಕಿನ ಕೂಸನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಅವಿರೋಧ.

Spread the love

ಶುಕ್ರವಾರ ರಂದು ಕೂಸನಾಳ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಜರಗಿತು.
ಚುನಾವಣಾಧಿಕಾರಿಗಳಾಗಿ ಕಾಗವಾಡ ಬಿ ಯು ಓ, ಎಂ ಆರ್ ಮುಂಜೆ ಇವರ ನೇತೃತ್ವದಲ್ಲಿ ನೆರವೇರಿತು.

ಅಧ್ಯಕ್ಷರಾಗಿ ಅಶೋಕ್ ನಾದನಿ, ಉಪಾಧ್ಯಕ್ಷರಾಗಿ ದೀಪಾ ವಿಜಯಕುಮಾರ್ ಖನ್ನಿಕುಡೆ ಆಯ್ಕೆಗೊಂಡರು,

ಮುಳವಾಡ-ಕುಸನಾಳ ಗ್ರಾಮಗಳ 14 ಪಂಚಾಯಿತಿ ಸದಸ್ಯರು ಇದ್ದಾರೆ.

ಚುನಾವಣೆ ಜರುಗಿದ ಬಳಿಕ ನೂತನ ಅಧ್ಯಕ್ಷ ಅಶೋಕ ನಾಂದನಿ ಮಾತನಾಡಿ ಎಲ್ಲ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ, ನಮ್ಮ ಮುಖಂಡರಾದ ಮಾಜಿ ಸಚಿವ ಸೀಮಂತ ಪಾಟೀಲ್ ಇವರ ಆಶೀರ್ವಾದ ನಮಗೂ ಸದಾ ಇದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಜೈಪಾಲ್ ಎರಂಡೋಲೆ ಮಾತನಾಡಿ ನಮ್ಮ ಗ್ರಾಮದಲ್ಲಿ ಪ್ರತಿಯೊಬ್ಬರು ಅಭಿವೃದ್ಧಿ ಕಾಮಗಾರಿಗಳಿಗೆ ಒಂದಾಗುತ್ತೇವೆ ನೂತನ ಅಧ್ಯಕ್ಷ ಅಶೋಕ ನಾಂದನಿ ಹಾಗೂ ಉಪಾಧ್ಯಕ್ಷರು ಗ್ರಾಮದ ಅಭಿವೃದ್ಧಿಯಲ್ಲಿ ಆಸಕ್ತಿ ವಹಿಸಿಲಿ ಅವರಿಗೆ ನಾವು ಎಲ್ಲ ಸದಸ್ಯರು ಸಹಕಾರ ನೀಡಲು ಸಿದ್ಧ ಇದ್ದೇವೆ ಎಂದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ