ಹೈದರಾಬಾದ್: ಆದಿಪುರುಷ್ ಬಿಡುಗಡೆ ಬಳಿಕ ವಿದೇಶಕ್ಕೆ ಹಾರಿದ್ದ ಡಾರ್ಲಿಂಗ್ ಪ್ರಭಾಸ್, ಇದೀಗ ಮತ್ತೆ ವಾಪಸ್ ಭಾರತಕ್ಕೆ ಬಂದಿದ್ದಾರೆ.
ಅಮೆರಿಕದಲ್ಲಿ ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ಈವೆಂಟ್ನಲ್ಲಿ ಭಾಗವಹಿಸಿದ್ದ ಅವರು, ಇಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಅಂತಾರಾಷ್ಟ್ರೀಯ ಮಟ್ಟದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಸಮಾರಂಭದಲ್ಲಿ ಪ್ರಭಾಸ್ ಜೊತೆಗೆ ‘ಕಲ್ಕಿ 2898 AD’ ಚಿತ್ರ ತಂಡದ ಎಲ್ಲ ನಟ-ನಟಿಯರು ಕೂಡ ಭಾಗಿಯಾಗಿದ್ದರು. ಚಿತ್ರೀಕರಣ ವೇಳೆ ಪೆಟ್ಟು ಬಿದ್ದು ಸುರಿಸುಮಾರು 50 ದಿನಗಳನ್ನು ವಿದೇಶದಲ್ಲಿಯೇ ಕಳೆದ ಡಾರ್ಲಿಂಗ್ ಪ್ರಭಾಸ್, ಇದೀಗ ಭಾರತಕ್ಕೆ ಮರಳಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ಆಗಮಿಸುತ್ತಿದ್ದಂತೆ ಕ್ಯಾಮರಾಗಳ ಕಣ್ಣು ಅವರ ಮೇಲೆ ಬಿದ್ದಿವೆ. ಕಪ್ಪು ಪ್ಯಾಂಟ್ ಮತ್ತು ಅದೇ ಬಣ್ಣದ ದೊಡ್ಡ ಸ್ವೆಟ್‌ಶರ್ಟ್ ಧರಿಸಿದ್ದರು. ಅದರ ಜೊತೆ ಟೋಪಿ ಧರಿಸಿದ್ದ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಅವರ ಈ ವಿಶೇಷ ಲುಕ್ ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ.