Breaking News

ಮೋದಿ ಅವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ : ಲಾಲು ಪ್ರಸಾದ್ ಯಾದವ್

Spread the love

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಅನಾರೋಗ್ಯದ ನಡುವೆಯೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಹೋಟೆಲ್‍ನ ಸಭೆಯಲ್ಲಿ ತಮ್ಮ ಪುತ್ರರೂ ಆದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಭಾಗವಹಿಸಿದ್ದ ಅವರು, ಪ್ರಧಾನಮಂತ್ರಿಯವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ ಎಂದಿದ್ದಾರೆ.

 

ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಈ ಸಭೆ ಅಗತ್ಯವಿದೆ. ಪ್ರಧಾನಮಂತ್ರಿಯವರ ಶಾಸನಗಳು ಜನರಿಗೆ ಮಾರಕವಾಗಿದೆ. ರೈತರು, ಕಾರ್ಮಿಕರು, ಯುವಜನರಿಗೆ ರಕ್ಷಣೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸಭೆ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ನಂತರ ಹಿರಿಯ ನಾಯಕರ ಜೊತೆ ನಿಂತು ಫೊಟೋ ತೆಗೆಸಿಕೊಂಡು ಸಭೆಗೆ ತೆರಳಿದ್ದಾರೆ. ಪ್ರತೀ ಹಂತದಲ್ಲೂ ಲಾಲು ಪ್ರಸಾದ್ ಯಾದವ್ ಅಂತು ಗಮನ ಸೆಳೆಯುವುದು ಸಾಮಾನ್ಯವಾಗಿದೆ.


Spread the love

About Laxminews 24x7

Check Also

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂ ಗಳ ಸೇರ್ಪಡೆ ವಿವಾದ – ನಿರ್ಧಾರ ಕೈಬಿಡುವಂತೆ ಸಿಎಂಗೆ ಹೆಚ್‌ಡಿಕೆ ಪತ್ರ

Spread the loveಮಂಡ್ಯ: ಜಿಲ್ಲೆಯ ಮದ್ದೂರು  ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ