Breaking News

ನಕಲಿ ಜಾತಿ ಪ್ರಮಾಣಪತ್ರಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಎಸ್​ಸಿ/ಎಸ್​ಟಿ ಯುವಕರಿಂದ ನಗ್ನ ಪ್ರತಿಭಟನಾ ಮೆರವಣಿಗೆ

Spread the love

ರಾಯಪುರ (ಚತ್ತೀಸ್​ಗಢ): ನಕಲಿ ಜಾತಿ ಪ್ರಮಾಣಪತ್ರಗಳ ಮೇಲೆ ಸರ್ಕಾರಿ ಉದ್ಯೋಗ ಪಡೆದು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್​ಸಿ-ಎಸ್​ಟಿ)ದ ಸುಮಾರು 50 ಯುವಕರು ನಗ್ನ ಪ್ರತಿಭಟನಾ ಮೆರವಣಿಗೆ ನಡೆಸಿರುವ ಘಟನೆ ಛತ್ತೀಸ್​ಗಢದ ರಾಜಧಾನಿ ರಾಯಪುರದಲ್ಲಿ ಮಂಗಳವಾರ ನಡೆದಿದೆ.

ಸಂಪೂರ್ಣ ಬೆತ್ತಲಾಗಿ ರಸ್ತೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ಯುವಕರು ಹೊರ ಹಾಕಿದ್ದಾರೆ.

ಜಾತಿ ಪ್ರಮಾಣ ಪತ್ರ ನೀಡಿಕೆ ಕುರಿತು ಘೋಷಣಾ ಫಲಕಗಳನ್ನು ಹಿಡಿದುಕೊಂಡು ಯುವಕರು ಮುಖ್ಯ ರಸ್ತೆಗಳ ಮೂಲಕವೇ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಕೆಲವು ಯುವಕರು ಘೋಷಣಾ ಫಲಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಮತ್ತೆ ಕೆಲವರು ಅದೇ ಫಲಕಗಳಿಂದ ತಮ್ಮ ದೇಹವನ್ನು ಮುಚ್ಚಿಕೊಂಡಿದ್ದರು. ಸುಮಾರು 50ಕ್ಕೂ ಹೆಚ್ಚು ಯುವಕರ ಗುಂಪು ಈ ರೀತಿಯಾಗಿ ನಡುರಸ್ತೆಯಲ್ಲಿ ಬೆತ್ತಲೆಯಾಗಿ ಪ್ರತಿಭಟನೆ ಹೋಗುತ್ತಿರುವುದನ್ನು ಕಂಡು ದಾರಿ ಮಧ್ಯೆಯಲ್ಲಿದ್ದ ಜನತೆ ಬೆಚ್ಚಿ ಬಿದ್ದಿದ್ದಾರೆ. ಪ್ರತಿಭಟನಾಕಾರ ಯುವಕರು ಘೋಷಣೆಗಳನ್ನು ಕೂಗುತ್ತಾ ವಿಧಾನಸೌಧದ ರಸ್ತೆಯಲ್ಲಿ ಸಾಗಿದ್ದು, ವಿಧಾನಸೌಧದ ಹೊರಗಡೆ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು ಎಲ್ಲರನ್ನೂ ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ.

ನಗ್ನ ಪ್ರತಿಭಟನಾ ಮೆರವಣಿಗೆಗೆ ಕಾರಣವೇನು?: ಪ್ರತಿಭಟನಾನಿರತ ಯುವಕರ ಪ್ರಕಾರ, ಛತ್ತೀಸ್​ಗಢ ರಾಜ್ಯ ರಚನೆಯಾದ ನಂತರ ಮೀಸಲಾತಿ ರಹಿತರಿಗೂ ಮೀಸಲಾತಿ ವರ್ಗದಲ್ಲಿ ಉದ್ಯೋಗ ದೊರೆಯುತ್ತಿದೆ. ಸಣ್ಣ ಹುದ್ದೆಯಿಂದ ಹಿಡಿದು ದೊಡ್ಡ ಹುದ್ದೆಯವರೆಗೂ ಇಂಥವರು ಬಹಳಷ್ಟಿದ್ದಾರೆ. ಈ ಕುರಿತ ದೂರಿನ ಆಧಾರದ ಮೇಲೆ ಸರ್ಕಾರವು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿತ್ತು.

 


Spread the love

About Laxminews 24x7

Check Also

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the loveಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ