ಬೆಂಗಳೂರು: ದೇಶ ನಿರೀಕ್ಷೆ ಮಾಡಿದಂತೆ ಇಂದಿನ ಪ್ರತಿ ಪಕ್ಷಗಳ ಸಭೆ ಯಶಸ್ವಿಯಾಗಿ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಈ ಸಭೆ ಭಾರತದ ಧ್ವನಿಯಾಗಿತ್ತು. ದೇಶದ ಎಲ್ಲ ಪ್ರತಿಪಕ್ಷಗಳ ನಾಯಕರು ಭಾರತವನ್ನು ರಕ್ಷಣೆ ಮಾಡುವ ತೀರ್ಮಾನ ಮಾಡಿದ್ದಾರೆ ಎಂದಿದ್ದಾರೆ.
ಮೈತ್ರಿಕೂಟದ ನಾಯಕರ ಜೊತೆ ಡಿಕೆ ಶಿವಕುಮಾರ್ಇದಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, “ಇಂದಿನ ಸಭೆಯು ಭಾರತದ ಧ್ವನಿಯಾಗಿದೆ.. ಅದರಲ್ಲಿ ಸಾಕಷ್ಟು ಶಕ್ತಿ ಇದೆ ಮತ್ತು ಎಲ್ಲಾ ವಿರೋಧ ಪಕ್ಷಗಳು ಭಾರತವನ್ನು ರಕ್ಷಿಸಲು ಬಯಸುತ್ತವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆಯ ಕುರಿತು ಮಾತನಾಡಿದ್ದರು.
ಮೈತ್ರಿಕೂಟದ ನಾಯಕರ ಜೊತೆ ಡಿಕೆ ಶಿವಕುಮಾರ್ಬಿಜೆಪಿ ಇಷ್ಟು ದಿನ ಎನ್ಡಿಎ ಸಭೆ ಕರೆದಿಲ್ಲ. ಅವರು ಈಗ ಎಚ್ಚೆತ್ತುಕೊಂಡಿದ್ದಾರೆ. ಈಗಲಾದರೂ ಎನ್ಡಿಎ ಸ್ನೇಹಿತರು ಸಂತೋಷವಾಗಿರಬೇಕು. ಇಷ್ಟು ದಿನ ಎನ್ಡಿಎ ಅಗತ್ಯವಿಲ್ಲ.. ವಿರೋಧ ಪಕ್ಷಗಳನ್ನು ಏಕಾಂಗಿಯಾಗಿ ಎದುರಿಸುತ್ತೇನೆ ಎಂದು ಹೇಳುತ್ತಿದ್ದರು. ಈಗ ಅವರ ನಡೆ ನೋಡಿದರೆ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗುತ್ತದೆ. ಅದು ಅವರ ರಾಜಕೀಯ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಇಂಡಿಯಾ ಮೈತ್ರಿಕೂಟಕ್ಕೆ ಯಾರು ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂಬುದು ಸಮಯ ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ.