Breaking News

ಏಕಾಂಗಿಯಾಗಿ ಉಳಿದ J.D.S.ಕಾಂಗ್ರೆಸ್​ ಕರೆಯಲಿಲ್ಲ.. ಬಿಜೆಪಿಯೂ ಬನ್ನಿ ಎನ್ನಲಿಲ್ಲ:H,D.K

Spread the love

ಬೆಂಗಳೂರು: ಎನ್​ಡಿಎ ಕೂಟ ಹಾಗೂ ವಿಪಕ್ಷ ಒಕ್ಕೂಟದ ಮಧ್ಯೆ ಜೆಡಿಎಸ್​ ಎಲ್ಲೂ‌ ಸಲ್ಲದಂತಾಗಿದೆ.

ಎರಡು ಒಕ್ಕೂಟಗಳಿಂದ ಆಹ್ವಾನ ಬಾರದೇ ಜೆಡಿಎಸ್ ಅತಂತ್ರವಾಗಿ ಉಳಿದಿದೆ. ಎರಡೂ ಮೈತ್ರಿ ಒಕ್ಕೂಟದಿಂದ ನಿರ್ಲಕ್ಷ್ಯಕ್ಕೊಳಗಾದ ಜೆಡಿಎಸ್ ಯಾರಿಗೂ ಬೇಡವಾಯಿತಾ ಎಂಬ ಅನುಮಾನ ಮೂಡುತ್ತಿದೆ. ಒಂದೆಡೆ ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಎನ್​ಡಿಎ ಮೈತ್ರಿಕೂಟವನ್ನು ಬಲ ಪಡಿಸುತ್ತಿದ್ದರೆ. ಇನ್ನೊಂದೆಡೆ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷ ಕೂಟದ ಶಕ್ತಿ ವರ್ಧನೆ ಮಾಡಲಾಗುತ್ತದೆ.

ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎನ್​ಡಿಎ ಮೈತ್ರಿ ಕೂಟ ಹಾಗೂ ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟದ ಸಭೆಗಳು ನಡೆಯುತ್ತಿವೆ. ಲೋಕಸಭೆ ಅಖಾಡದಲ್ಲಿ ತಮ್ಮದೇ ರಣತಂತ್ರದೊಂದಿಗೆ ಸಮಾನ ಮನಸ್ಕರ ಒಕ್ಕೂಟ ರಚಿಸಿ ಚುನಾವಣಾ ಕಣಕ್ಕಿಳಿಯಲು ಕಸರತ್ತು ಆರಂಭವಾಗಿದೆ. ಎನ್​ಡಿಎ ಕೂಟ ಹಾಗೂ ವಿಪಕ್ಷಗಳ ಒಕ್ಕೂಟಗಳು ತಮ್ಮ ಬಲವರ್ಧನೆಗಾಗಿ ವಿವಿಧ ಪ್ರಾದೇಶಿಕ ಪಕ್ಷಗಳನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತಿವೆ.

ಸಣ್ಣ ಪುಟ್ಟ ಪಕ್ಷಗಳನ್ನು ಒಕ್ಕೂಟದ ಭಾಗವಾಗಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮದೇ ದಾರಿಯಲ್ಲಿ ರಣತಂತ್ರ ರೂಪಿಸುತ್ತಿದೆ. ಈ ಸಂಬಂಧ ಬಿಜೆಪಿ ಎನ್​ಡಿಎ 38 ಮೈತ್ರಿ ಪಕ್ಷಗಳೊಂದಿಗೆ ಸಭೆ ನಡೆಸಿದರೆ, ವಿಪಕ್ಷಗಳು 26 ಪಕ್ಷಗಳೊಂದಿಗೆ ಸಭೆ ನಡೆಸಿದೆ. ಆದರೆ, ಇತ್ತ ಜೆಡಿಎಸ್ ಪಕ್ಷ ಮಾತ್ರ ಏಕಾಂಗಿಯಾಗಿ ಉಳಿದಿದೆ.

ಕರೆಯೋಲೆ ಬರದೆ ಜೆಡಿಎಸ್ ಏಕಾಂಗಿ: ಇತ್ತ ಎನ್​ಡಿಎ ಮೈತಿಕೂಟದಿಂದಲೂ ಆಹ್ವಾನ ಬಾರದೇ, ಅತ್ತ ವಿಪಕ್ಷಗಳ ಮೈತ್ರಿಕೂಟದಿಂದಲೂ ಕರೆಯೋಲೆ ಬಾರದೇ ಜೆಡಿಎಸ್ ಏಕಾಂಗಿಯಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಎರಡು ಮೈತ್ರಿಕೂಟಗಳಿಗೆ ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಬೇಡವಾಯಿತಾ ಎಂಬ ಅನುಮಾನ ಮೂಡುತ್ತಿದೆ. ಇತ್ತ ಇಂದು ನಡೆದ ಎನ್​ಡಿಎ ಮೈತ್ರಿಕೂಟದ ಸಭೆಗೆ ಆಹ್ವಾನ ಬರಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.

ಎನ್​ಡಿಎ ಮೈತ್ರಿಕೂಟದಿಂದ ಇದುವರೆಗೆ ಯಾವುದೇ ಆಹ್ವಾನ ಬಂದಿಲ್ಲ. ಅತ್ತ ರಾಜಕೀಯ ಅಸ್ತಿತ್ವದ ಹಿನ್ನೆಲೆ ವಿಪಕ್ಷಗಳ ಮೈತ್ರಿಕೂಟದತ್ತ ಜೆಡಿಎಸ್ ಒಲವು ಹೊಂದಿಲ್ಲ. ಜೊತೆಗೆ ಬದಲಾದ ರಾಜಕೀಯ ಲೆಕ್ಕಾಚಾರದೊಂದಿಗೆ ವಿಪಕ್ಷಗಳ ಮೈತ್ರಿಕೂಟದಿಂದಲೂ ಜೆಡಿಎಸ್​ಗೆ ಯಾವುದೇ ಆಹ್ವಾನ ಬಂದಿಲ್ಲ. ಅಲ್ಲಿಗೆ ಜೆಡಿಎಸ್ ಎಲ್ಲೂ ಸಲ್ಲದ ಪರಿಸ್ಥಿತಿಯಲ್ಲಿ ಸಿಲುಕಿದಂತಿದೆ. ಬಿಜೆಪಿ ಈಗಾಗಾಲೇ ಮೈತ್ರಿ ಸಂಬಂಧ ಜೆಡಿಎಸ್ ಜೊತೆ ಔಪಚಾರಿಕ ಮಾತುಕತೆ ನಡೆಸಿದ್ದರೂ, ಕೆಲ ಷರತ್ತುಗಳ ಕಗ್ಗಂಟು, ರಾಜಕೀಯ ಲೆಕ್ಕಾಚಾರದ ಹಿನ್ನೆಲೆ ಜೆಡಿಎಸ್ ಜೊತೆಗೆ ಅಧಿಕೃತ ಮೈತ್ರಿಯಾಗಲು ಸಾಧ್ಯವಾಗಿಲ್ಲ. ಇತ್ತ ಜೆಡಿಎಸ್​ಗೆ ರಾಜ್ಯದಲ್ಲಿ ಬಲವರ್ಧನೆ ಮಾಡಲು ಮೈತ್ರಿಯ ಅನಿವಾರ್ಯತೆಯೂ ಇದೆ. ಒಬ್ಬ ಸಂಸದ, 19 ಶಾಸಕರ ಬಲ ಹೊಂದಿರುವ ಜೆಡಿಎಸ್ ನತ್ತ ಎರಡೂ ಮೈತ್ರಿಕೂಟ ಆಹ್ವಾನ ನೀಡದೇ ಇರುವುದು ಅಚ್ಚರಿ ಎನಿಸಿದೆ.

ಜೆಡಿಎಸ್ ಹೇಳುವುದೇನು?: ಈಗಾಗಲೇ ಮೈತ್ರಿಕೂಟದ ಭಾಗವಾಗಲು ಎನ್​ಡಿಎ ಮಿತ್ರ ಮಂಡಳಿಯಿಂದಾಗಲಿ, ವಿಪಕ್ಷಗಳ ಮಿತ್ರಕೂಟದಿಂದಾಗಲಿ ಆಹ್ವಾನ ಬಂದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಕುಮಾರಸ್ವಾಮಿ, ನಾನು ಕೇಂದ್ರದಲ್ಲಿ ಮಂತ್ರಿ ಆಗುತ್ತೇನೆ ಎಂಬ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಲೋಕಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆನೂ ಯಾವುದೇ ಚರ್ಚೆ ನಡೆದಿಲ್ಲ. ಎಲ್ಲರ ಜೊತೆ ಸೇರಿ ನಾವು ಎನ್​ಡಿಎ ಜೊತೆ ಹೋಗಬೇಕೋ. ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ