Breaking News

ಭೀಕರ ಪ್ರವಾಹ.. ಉತ್ತರ ಭಾರತಕ್ಕೆ ಬೈಕ್​ ರೈಡ್​ ಹೋಗಿದ್ದ ಕಾರವಾರದ ಯುವಕರು ಬದುಕಿ ಬಂದದ್ದೇ ಪವಾಡ!

Spread the love

ಕಾರವಾರ(ಉತ್ತರ ಕನ್ನಡ): ಬೈಕ್ ಏರಿ ಉತ್ತರಭಾರತ ಸುತ್ತುವ ಕನಸಿನೊಂದಿಗೆ ಕಾರವಾರದಿಂದ ತೆರಳಿದ್ದ ಸಾಹಸಿ ಯುವಕರ ತಂಡವೊಂದು ಹಿಮಾಚಲ ಪ್ರದೇಶದ ಬಳಿ ಸಂಭವಿಸಿದ ಪ್ರವಾಹದಿಂದ ಕೂದಲೆಳೆ ಅಂತರದಿಂದ ಪಾರಾಗಿದೆ. ಪ್ರಯಾಣದುದ್ದಕ್ಕೂ ಹಲವು ಅಡೆತಡೆಗಳನ್ನು ಎದುರಿಸಿ ಇದೀಗ ಸುರಕ್ಷಿತವಾಗಿ ಮರಳಿರುವ ಯುವಕರ ತಂಡ ತಮಗಾದ ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ. ಈ ಕುರಿತು ಒಂದು ಸ್ಪೆಷಲ್​ ರಿಪೋರ್ಟ್ ಇಲ್ಲಿದೆ ನೋಡಿ.

ಬೈಕ್ ಕ್ರೇಜ್ ಇರುವ ಬಹುತೇಕರಿಗೆ ದೂರದ ಊರುಗಳಿಗೆ ಪ್ರವಾಸ ಕೈಗೊಳ್ಳುವ ಹಂಬಲ ಕೂಡ ಇರುತ್ತದೆ. ಅದರಲ್ಲಿಯೂ ಲಡಾಕ್ ನಂತಹ ಸಾಹಸಿ ಪ್ರದೇಶಗಳಿಗೆ ತೆರಳಲು ಅದೆಷ್ಟೋ ಜನ ಎದುರು ನೋಡುತ್ತಿರುತ್ತಾರೆ. ಇಂತಹದೇ ಕನಸಿನೊಂದಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಉತ್ತರಭಾರತದ ಪ್ರವಾಸ ಕೈಗೊಂಡಿದ್ದ ಐವರು ಯುವಕರು ಹಿಮಾಚಲ ಪ್ರದೇಶದಲ್ಲಿ ಎದುರಾದ ಪ್ರವಾಹದಿಂದ ಅದೃಷ್ಟವಶಾತ್ ಪಾರಾಗಿ ತವರಿಗೆ ಮರಳಿದ್ದಾರೆ.

ಕಾರವಾರದ ಪ್ರಕಾಶ ನಾಯ್ಕ, ದರ್ಶನ ಭುಜಲೆ, ವೃಷಭ ಕಾಮತ್, ಅಲಿಸಾಬ್ ಕುಕ್ಕಳ್ಳಿ ಹಾಗೂ ಕುಮಟಾದ ಅಲ್ಮಾಬ್ರೂಕ್ ಗಣಿ ಸೇರಿ ಒಟ್ಟು ಐದು ಜನ ಮೂರು ರಾಯಲ್ ಎನ್‌ಫೀಲ್ಡ್​ನಲ್ಲಿ ಜೂನ್ 7 ರಂದು ಉತ್ತರಭಾರತದ ಕಡೆ ಪ್ರಯಾಣ ಬೆಳಸಿದ್ದರು. ಆದರೆ ಇದೇ ಸಮಯಕ್ಕೆ ಉತ್ತರ ಭಾರತದಲ್ಲಿ ಭಾರಿ ಮಳೆಗೆ ಪ್ರವಾಹ ಸೃಷ್ಟಿಯಾಗಿತ್ತು. ಹಿಮಾಚಲ ಪ್ರದೇಶದ ಕುಲು ಸಮೀಪ ಕಸೋಲ್ ಎಂಬಲ್ಲಿ ರಾತ್ರಿ ತಂಗಿದ್ದ ಐವರು ಬೆಳಗ್ಗೆ ಬೇಗನೆ ಎದ್ದು ಮಳೆಯಲ್ಲಿ ಮುಂದಿನ ಪ್ರಯಾಣ ಬೆಳೆಸಿದ್ದರು.

 


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ