Breaking News

ಸಂಬಳ ಬೇಕು, ಪಾಠ ಮಾತ್ರ ಮಾಡಲ್ಲ’

Spread the love

ಶಿಕ್ಷಕರು ಮಕ್ಕಳಿಗೆ ದೇವರ ಸಮಾನ. ತಾಯಿ ನಂತರ ಮಕ್ಕಳಿಗೆ ಶಿಕ್ಷಕರೇ ಎಲ್ಲವೂ ಎಂದರೆ ತಪ್ಪಾಗಲಾರದು. ಇಂಥಾ ಗುರುಗಳು ಯಾವಾಗಲೂ ಮಕ್ಕಳಿಗೆ ಪಾಠ ಮಾಡುವ ಕೆಲಸ ಮಾಡಬೇಕು. ಅದರಲ್ಲೂ ಮಕ್ಕಳಿಗಾಗಿಯೇ ಶಾಲೆ ಇರುವುದು. ಮಕ್ಕಳಿಗೆ ಪಾಠ ಮಾಡಲು ಎಂದೇ ಶಿಕ್ಷಕರ ನೇಮಕ ಮಾಡಿ ಸಂಬಳ ನೀಡುವುದು. ಇಲ್ಲೋರ್ವ ಕಿಡಿಗೇಡಿ ಶಿಕ್ಷಕನೋರ್ವ ಸಂಬಳ ತೆಗೆದುಕೊಂಡು ಸರಿಯಾಗಿ ಪಾಠ ಮಾಡದ ಘಟನೆ ಸಂಭವಿಸಿದೆ. ಅಲ್ಲದೇ ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ತನ್ನ ಬದಲಿಗೆ ಪಾಠ ಮಾಡಲು ಶಿಕ್ಷಕಿಯನ್ನು ನೇಮಿಸಿದ್ದಾನೆ.

ಇಂಥದ್ದೊಂದು ಆರೋಪ ಕೇಳಿ ಬಂದಿರುವುದು ಮಹೇಂದ್ರ ಕುಮಾರ್​ ಎಂಬ ಶಾಲಾ ಶಿಕ್ಷಕನ ಮೇಲೆ. ಈತ ಚಿತ್ತಾಪುರ ತಾಲೂಕಿನ ಬಾಳಿ ನಾಯಕ್​​​ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡೋ ಶಿಕ್ಷಕ. ಸರ್ಕಾರಿ ಸಂಬಳ ಈತನಿಗೆ, ಪಾಠ ಮಾಡುವುದು ಮಾತ್ರ ಯಾರೋ ಮಹಿಳೆ.


Spread the love

About Laxminews 24x7

Check Also

ಗ್ರಾಪಂ ಅಭಿವೃದ್ಧಿಗೆ ಸದಸ್ಯರ ಸಹಕಾರ ಅತ್ಯಗತ್ಯ

Spread the loveಆನೇಕಲ್​ : ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಎಲ್ಲರೂ ನೀಡಿದ ಸಹಕಾರ ಕಾರಣ ಎಂದು ಹೆನ್ನಾಗರ ಗ್ರಾಪಂ ಅಧ್ಯಕ್ಷ ಕೆ.ವಿನಯ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ