Breaking News

ಕುಡಿಯಲು ಹಣ ನೀಡುವಂತೆ ಮನೆಯವರಿಗೆ ಪೀಡಿಸುತ್ತಿದ್ದ ಯುವಕನ ಹೊಡೆದು ಕೊಂದ ತಂದೆ, ಸಹೋದರ!

Spread the love

ಚಿಕ್ಕೋಡಿ: ಕುಡಿತದ ಚಟಕ್ಕೆ ದಾಸನಾಗಿ ಕುಟುಂಬಸ್ಥರನ್ನು ಪೀಡಿಸುತ್ತಿದ್ದ ಯುವಕನನ್ನು ಸ್ವಂತ ತಂದೆ ಮತ್ತು ಅಣ್ಣನೇ ಹೊಡೆದು ಸಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸೋಮಯ್ಯ ಮಹಾಲಿಂಗಯ್ಯ ಹಿರೇಮಠ (24) ಮೃತ ದುರ್ದೈವಿ. ಆರೋಪಿಗಳಾದ ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ, ಬಸಯ್ಯ ಹಿರೇಮಠ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾರುಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ : ಜುಲೈ 10ರಂದು ಸೋಮಯ್ಯ ಮದ್ಯಪಾನ ಮಾಡಲು ಹಣ ನೀಡುವಂತೆ ಕುಟುಂಬಸ್ಥರಿಗೆ ಬೇಡಿಕೆ ಇಟ್ಟಿದ್ದಾನೆ. ಪ್ರತಿನಿತ್ಯ ಕುಡಿದು ಬಂದು ರಾತ್ರಿಯಿಡೀ ಮನೆಯಲ್ಲಿ ಜಗಳ ಮಾಡುತ್ತಿದ್ದ ಈತನ ವರ್ತನೆಯಿಂದ ಮನೆಯವರು ರೋಸಿ ಹೋಗಿದ್ದರಂತೆ. ಕಳೆದ ಸೋಮವಾರ ಕಲಹ ತೀವ್ರ ಸ್ವರೂಪಕ್ಕೆ ತಿರುಗಿದೆ. ಉಪಟಳ ತಾಳಲಾರದೆ ಮದ್ಯಪಾನ ವ್ಯಸನಿಯ ತಲೆಗೆ ತಂದೆ ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ ಹೊಡೆದಿದ್ದಾರೆ. ಸೋಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಯುವಕನ ಅಂತ್ಯಕ್ರಿಯೆ ಮಾಡಲಾಗಿದೆ. ಬಳಿಕ, ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮೃತ ಯುವಕನ ತಂದೆ ಹಾಗೂ ಸಹೋದರರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆಗಾಗಿ ಚಿತಾಗಾರದಿಂದ ಅಸ್ಥಿಪಂಜರದ ಕೆಲವು ಭಾಗಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಬೆಳಗಾವಿ ಎಸ್​ಪಿ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಕೆ.ಎಸ್.ಆರ್. ಸಿ ಬಿ ಎಸ್ ಸಿ ಶಾಲಾ ಮಕ್ಕಳಲ್ಲಿ ಆತ್ಮರಕ್ಷಣೆಯ ಕಲೆ: 150 ವಿದ್ಯಾರ್ಥಿಗಳಿಗೆ ಕರಾಟೆ ಬೆಲ್ಟ್ ವಿತರಣೆ

Spread the loveಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಮತ್ತು ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ ವತಿಯಿಂದ ಕೆ.ಎಸ್.ಆರ್. ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ