ಪುಡಿ ರೌಡಿಗಳ ಗುಂಪೊಂದು ವ್ಯಕ್ತಿ ಓರ್ವನಿಗೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಗರದ ಇಸ್ಲಾಂಪೂರ ರಸ್ತೆಯ ಮಸೀದಿ ಹತ್ತಿರದ ಸಿದೀಕ್ ಕಿನಾಲ್ ಬಳಿ ನಡೆದಿದೆ.
ಚಾಕು ಇರಿತಕೊಳಗಾದ ವ್ಯಕ್ತಿ ಖಾದರ ಭಾಷಾ ಔದರಿ (೨೬) ಎಂಬಾತನೇ ಸಾವನ್ನಪ್ಪಿದ್ದಾನೆ.
ಹಳೇ ದ್ವೇಷದ ಹಿನ್ನಲೆಯಲ್ಲಿ ಉಮರೆಜ್ ಹಾಗೂ ಅವೇಜುಲ್ಲಾ ಎಂಬ ಆರೋಪಿಗಳ ಗುಂಪೊಂದು ಬರ್ಬರವಾಗಿ ಚಾಕು ಇರಿತ ಮಾಡಿ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಖಾದರಸಾಬ ಔದರಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.