Breaking News

ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಳು ಅಮ್ಮ; ಮಹಿಳಾ ಪೊಲೀಸ್‌ ಅಕ್ಕರೆಗೆ ನಲಿದಾಡಿತು ಕಂದಮ್ಮ

Spread the love

ಅಹಮದಾಬಾದ್ (ಗುಜರಾತ್​): ಹೆಣ್ಣೆಂದರೆ ಹಾಗೆಯೇ.

ಭೂಮಿ ಭಾರವನ್ನೂ ಹೊರುತ್ತಾಳೆ, ಯಾರದೇ ಕಣ್ಣೀರಿಗೂ ಮಿಡಿಯುತ್ತಾಳೆ. ಅದಕ್ಕೆ ಅಲ್ವೇ ನಾರಿಯರಿಗೆ ವಿಶ್ವಮನ್ನಣೆ ಇರೋದು. ಗುಜರಾತ್​ ಹೈಕೋರ್ಟ್​ ಜವಾನ (ಪ್ಯೂನ್​) ಹುದ್ದೆಯ ಪರೀಕ್ಷೆಗೆ ಮಹಿಳೆಯೊಬ್ಬರು ಹಾಜರಾಗಿದ್ದರೆ, ಆಕೆಯ ಮಗುವನ್ನು ಮಹಿಳಾ ಪೊಲೀಸ್​ ಕಾನ್​ಸ್ಟೇಬಲ್​ ಒಬ್ಬರು ಎತ್ತಿಕೊಂಡು ಪರೀಕ್ಷೆ ಮುಗಿಸಿ ಬರುವವರೆಗೂ ರಕ್ಷಣೆ ಒದಗಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಗು ಕೂಡ ಆಕೆಯೊಂದಿಗೆ ನಗುತ್ತಾ ನಲಿದಾಡಿದೆ.

ಭಾನುವಾರದಂದು ಗುಜರಾತ್‌ ಹೈಕೋರ್ಟ್​ನ ಜವಾನ ಹುದ್ದೆಗೆ ಪರೀಕ್ಷೆ ನಡೆದಿದೆ. 6 ತಿಂಗಳ ಮಗುವಿನ ಸಮೇತ ಬಂದಿದ್ದ ಮಹಿಳೆಗೆ ಕೇಂದ್ರಕ್ಕೆ ಭದ್ರತೆ ನೀಡಲು ನಿಯೋಜಿಸಲಾಗಿದ್ದ ಮಹಿಳಾ ಕಾನ್​ಸ್ಟೇಬಲ್​ ದಯಾ ಬೆನ್​ ಎಂಬಾಕೆ ನೆರವಾಗಿದ್ದಾರೆ. ಪರೀಕ್ಷೆಗೆ ಕೆಲವೇ ನಿಮಿಷಗಳಿದ್ದಾಗ ಮಗು ಅಳಲು ಶುರು ಮಾಡಿದೆ. ಮಹಿಳೆ ಸಂತೈಸಿದರೂ ಅದು ರಚ್ಚೆ ಬಿಡಲಿಲ್ಲ. ಇದರಿಂದ ಪರೀಕ್ಷೆ ಬರೆಯುವುದು ಕಷ್ಟ ಎಂಬಂತಾಗಿತ್ತು. ಇದೇ ವೇಳೆ ಅಲ್ಲಿದ್ದ ದಯಾ ಬೆನ್​ ಅವರು ತಾವು ಮಗುವನ್ನು ನೋಡಿಕೊಳ್ಳುವುದಾಗಿ ಮಹಿಳೆಗೆ ಹೇಳಿದ್ದಾರೆ.

 

 

ಅದರಂತೆ 6 ತಿಂಗಳ ಮಗುವನ್ನು ದಯಾ ಬೆನ್​ ಅವರಿಗೆ ನೀಡಿದ ಮಹಿಳೆ ಪರೀಕ್ಷೆಗೆ ಹಾಜರಾಗಿದ್ದಾರೆ. ಇತ್ತ ಮಹಿಳಾ ಕಾನ್​ಸ್ಟೇಬಲ್​ ತಾಯಿ ಪರೀಕ್ಷೆ ಬರೆದು ಹೊರಬರುವವರೆಗೂ ಮಗುವನ್ನು ಅಕ್ಕರೆಯಿಂದ ನೋಡಿಕೊಂಡಿದ್ದಾರೆ. ಮಗು ಆಕೆಯೊಂದಿಗೆ ಸಂತೋಷದಿಂದಲೇ ನಲಿದಾಡಿದೆ. ಇದರ ಚಿತ್ರಗಳನ್ನು ಅಹಮದಾಬಾದ್​ ಪೊಲೀಸರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ