Breaking News

ಮಳೆ ಕೊರತೆ.. ಅಕ್ಕಿ ಬೆಲೆಯೂ ಆಗಲಿದೆ ದುಬಾರಿ

Spread the love

ನವದೆಹಲಿ: ದೇಶದಲ್ಲಿ ಈಗಾಗಲೇ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಇದಕ್ಕೆ ಕಾರಣ ಹೆಚ್ಚಿದ ಮಾರುಕಟ್ಟೆ ಮತ್ತು ಕಡಿಮೆ ಪೂರೈಕೆ ಆಗಿದೆ.

ಸದ್ಯ ಇದರ ಬೆನ್ನಲ್ಲೇ ಜನರು ಮತ್ತೊಂದು ಅಗತ್ಯ ಆಹಾರ ಸಾಮಗ್ರಿಯ ಬರ ಎದುರಿಸುವಂತೆ ಆಗಲಿದೆ. ಅಚ್ಚರಿ ಆದರೂ ಹೌದು, ಮಳೆ ಕೊರತೆ ಮತ್ತು ಕಡಿಮೆ ಬಿತ್ತನೆಯಿಂದಾಗಿ ಅಕ್ಕಿ ಇಳುವರಿ ಕಡಿಮೆಯಾಗಿದೆ. ಇದರ ಕೊರತೆ ಎದುರಾಗುವ ದಿನ ಸನ್ನಿಹಿತವಾಗಿದೆ ಎಂದು ಮೋತಿಲಾಲ್​ ಒಸ್ವಾಲ್​ ಫೈನಾನ್ಸ್​ ಸರ್ವೀಸ್​ ವರದಿಯಲ್ಲಿ ತಿಳಿಸಿದೆ.

ಜಾಗತಿಕವಾಗಿ ಅಕ್ಕಿ ಬೆಲೆ ದುಬಾರಿಯಾಲಿದ್ದು, ಇದರಿಂದ ಸ್ಥಳೀಯವಾಗಿಯೂ ಅಕ್ಕಿ ದರ ಏರಿಕೆ ಕಾಣಲಿದೆ. ಒಟ್ಟಾರೆ ಸಿಪಿಐ (ಗ್ರಾಹಕ ದರ ಸೂಚ್ಯಂಕ) ಬ್ಯಾಸ್ಕೆಟ್​​ 4.4 ರಷ್ಟಿದೆ.

ಮಾನ್ಸೂನ್​ ಮಳೆ ಕೊರತೆಯಿಂದಾಗಿ ಪ್ರಮುಖವಾಗಿ ಅಕ್ಕಿ ಉತ್ಪಾದಿಸುವ ರಾಜ್ಯದಲ್ಲಿ ಶೇ 49ರಷ್ಟು ಉತ್ಪಾದನೆ ಹಂಚಿಕೆ ಕುಂಠಿತವಾಗಿದೆ. ಅವುಗಳೆಂದರೆ ಪಶ್ಚಿಮ ಬಂಗಾಳ ಶೇ 11ಕ್ಕಿಂತ ಕಡಿಮೆ ಉತ್ಪಾದನೆ, ಉತ್ತರ ಪ್ರದೇಶ ಶೇ 2ರಷ್ಟು, ಆಂಧ್ರ ಪ್ರದೇಶ ಶೇ 22ರಷ್ಟು, ಒಡಿಶಾ ಶೇ 25ರಷ್ಟು, ತೆಲಂಗಾಣ ಶೇ 35ರಷ್ಟು, ಛತ್ತೀಸ್​ಗಢ ಶೇ 12ರಷ್ಟು, ಬಿಹಾರ ಶೇ 29ರಷ್ಟು ಮತ್ತು ಅಸ್ಸೋಂನಲ್ಲಿ ಶೇ 2ರಷ್ಟು ಬಿತ್ತನೆ ಕಡಿಮೆಯಾಗಿದ್ದು, ಇದು ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ


Spread the love

About Laxminews 24x7

Check Also

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹಾರಾಟ ಕಡಿಮೆ: ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಕ್ರೋಶ

Spread the loveನವದೆಹಲಿ: ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತವಾದ ಬೆಳಗಾವಿ  ನಗರವು ಶಿಕ್ಷಣ, ಉದ್ಯಮ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ