ಬೆಂಗಳೂರು: ಕೆಲ ದಿನಗಳಿಂದ ಟೊಮೆಟೊ ಬೆಲೆ ಗಗನಕ್ಕೇರಿದೆ. ಇದೇ ಸಮಯವನ್ನು ಕಾದು ಕುಳಿತಿರುವ ಕೆಲ ಖದೀಮರು ಟೊಮೆಟೊ ಕದಿಯುತ್ತಿದ್ದಾರೆ.
ಗಾಡಿ ಟಚ್ ಆಗಿದೆ ಎಂದು ಸುಳ್ಳು ಹೇಳಿದ ಮೂವರು ಆರೋಪಿಗಳು ಟೊಮೆಟೊ ತುಂಬಿದ್ದ ಬೊಲೆರೊ ವಾಹನವನ್ನು ಹೈಜಾಕ್ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಈ ಸಂಬಂಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.