ಬೆಂಗಳೂರು : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಹಿಂದೆ ಐಸಿಸ್ ಚಿತಾವಣೆ ಇದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಚಿತ್ರಹಿಂಸೆ ಮಾಡಿ ಕರೆಂಟ್ ಶಾಕ್ ಕೊಟ್ಟು ಸ್ವಾಮೀಜಿ ಅವರನ್ನು ಕೊಂದಿದ್ದಾರೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ. ಇನ್ನು, ಭಯಾನಕ ಘಟನೆ ಭವಿಷ್ಯದಲ್ಲಿ ಕಾಣುವ ಆತಂಕ ಇದೆ. ಘಟನೆ ಹಿಂದೆ ಐಸಿಸ್ ಉಗ್ರರ ಸಂಚು ಇದೆ ಎಂದು ಆರೋಪಿಸಿದರು.
ಸರ್ವ ಸಂಗ ತ್ಯಾಗ ಮಾಡಿದ ಜೈನ ಮುನಿಗಳ ಹತ್ಯೆಯ ಹಿಂದೆ ಪಿತೂರಿ ಇದೆ. ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು. ಸ್ವಾಮಿಗಳು ಆರ್ಥಿಕ ವ್ಯವಹಾರ ಮಾಡಿರುವ ಸಾಧ್ಯತೆ ಇಲ್ಲ. ಭಕ್ತರು ಆರ್ಥಿಕ ವ್ಯವಹಾರ ಮಾಡಿರಬಹುದು. ಸಂಸ್ಕಾರ ಕೊಡುವ ಮುನಿಗಳು ಆರ್ಥಿಕ ವ್ಯವಹಾರ ಮಾಡಲು ಸಾಧ್ಯವಿಲ್ಲ. ಸರ್ಕಾರ ವಿಷಯವನ್ನು ಮುಚ್ಚಿಡುವ ಯತ್ನ ಮಾಡುತ್ತಿದೆ. ಎಲ್ಲ ಮುನಿಗಳಿಗೆ ರಕ್ಷಣೆ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
Laxmi News 24×7