ಬೆಂಗಳೂರು: ಇತ್ತೀಚೆಗೆ ವ್ಯಕ್ತಿಯೊಬ್ಬರು ಅಕ್ರಮವಾಗಿ ಸದನ ಪ್ರವೇಶಿಸಿದ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ಘಟನೆ ವಿಧಾನಸೌಧದ ಆವರಣದಲ್ಲಿ ನಡೆದಿದೆ.
ವಿಧಾನಸೌಧದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿ ಚಾಕು ಪತ್ತೆಯಾಗಿದೆ.
ತಿಪ್ಪೇರುದ್ರಪ್ಪ ಎಂಬುವರು ಸದನದೊಳಗೆ ಅಕ್ರಮವಾಗಿ ಪ್ರವೇಶಿಸಿ ಭದ್ರತಾ ಲೋಪವಾದ ಹಿನ್ನೆಲೆಯಲ್ಲಿ ಇದೀಗ ವಿಧಾನಸೌಧದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ವಿಧಾನಸೌಧಕ್ಕೆ ಬರುವ ಎಲ್ಲರನ್ನೂ ತೀವ್ರವಾಗಿ ತಪಾಸಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿ ಚಾಕು ಪತ್ತೆಯಾಗಿದೆ.
ಇತ್ತೀಚೆಗೆ ನಡೆದಿದ್ದ ಭದ್ರತಾ ಲೋಪ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಒದಗಿಸಲಾಗಿದ್ದ ಬಿಗಿಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ತೀವ್ರ ತಪಾಸಣೆಗೊಳಪಡಿಸುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿ ಚಾಕು ಕಂಡುಬಂದಿದೆ. ವಿಧಾನಸೌಧದ ಪೂರ್ವ ಬಾಗಿಲಿನ ಮೂಲಕ ಈ ಮಹಿಳೆ ಒಳ ಪ್ರವೇಶಿಸಿದ್ದರು. ದ್ವಾರದಲ್ಲೇ ಇರುವ ಬ್ಯಾಗೇಜ್ ಸ್ಕ್ಯಾನಿಂಗ್ ಮಷಿನ್ನಲ್ಲಿ ಇವರ ಬ್ಯಾಗ್ಅನ್ನು ಸ್ಕ್ಯಾನಿಂಗ್ಗೆ ಒಳಪಡಿಲಾಗಿತ್ತು. ಈ ವೇಳೆ ಅದರಲ್ಲಿ ಚಾಕು ಇರುವುದನ್ನು ಸ್ಕ್ಯಾನಿಂಗ್ ಸ್ಕ್ರೀನ್ ನಲ್ಲಿ ಭದ್ರತಾ ಸಿಬ್ಬಂದಿ ನೋಡುತ್ತಾರೆ. ಕೂಡಲೇ ಆ ಬ್ಯಾಗ್ ಅನ್ನು ಪರಿಶೀಲಿಸಿ, ಅದರಲ್ಲಿದ್ದ ವಸ್ತುಗಳನ್ನು ಹೊರಹಾಕಿ ಚಾಕುವನ್ನು ವಶಪಡಿಸಿಕೊಳ್ಳುತ್ತಾರೆ.