ಗಡಿ ಜಿಲ್ಲೆಯ ಜೈನ ಮುನಿಯೊಬ್ಬರು ರಾತ್ರೋರಾತ್ರಿ ನಾಪತ್ತೆಯಾಗಿದ್ದಾರೆ. ಇದ್ದಕ್ಕಿದ್ದಂತೆ ಬಸದಿಯಿಂದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಕಾಣೆ ಆಗಿರೋದು ಭಕ್ತರಲ್ಲಿ ಆತಂಕ ಸೃಷ್ಟಿಸಿದೆ. ಮಹಾರಾಜರನ್ನ ಹುಡುಕಿಕೊಡುವಂತೆ ಭಕ್ತರು ಈಗ ಬೆಳಗಾವಿ ಜಿಲ್ಲಾ ಪೊಲೀಸರ ಮೊರೆ ಹೋಗಿದ್ದಾರೆ.15 ವರ್ಷದಿಂದ ಬಸದಿಯಲ್ಲಿದ್ದ ಸಂತನ ಮಿಸ್ಸಿಂಗ್ ಕೇಸ್ ಬೆಳಗಾವಿ ಜಿಲ್ಲೆ ಜನರನ್ನ ಬೆಚ್ಚಿಬೀಳಿಸಿದೆ.
.ಹದಿಹರೆಯದ ಯುವಕ, ಯುವತಿಯರು ಮಿಸ್ಸಿಂಗ್ ಕೇಸ್ ಇತ್ತಿಚೆಗೆ ಸಾಮಾನ್ಯವಾಗಿದೆ. ಆದರೆ ಈಗ ಇಡೀ ಸಮಾಜವೇ ಆತಂಕ ಪಡುವಂತಹ ಮಿಸ್ಸಿಂಗ್ ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನೀವು ಹೀಗೆ ನೋಡ್ತಿರುವ ಪೋಟೋ ಇದಲ್ಲಿ ಇರೋ ಜೈನ ಮುನಿ ಮಿಸ್ಸಿಂಗ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನ ಬಸದಿಯಲ್ಲಿ ವಾಸವಿದ್ದರು.
ಇವರ ಹೆಸರು ಆಚಾರ್ಯ ಶ್ರೀ108 ಕಾಮಕುಮಾರ ನಂದಿ ಮಹಾರಾಜರು. ಕಳೆದ ಎರಡು ದಿನಗಳ ಹಿಂದೆ ಈ ಮಹಾರಾಜರು ನಾಪತ್ತೆಯಾಗಿದ್ದಾರೆ. ರಾತ್ರೋರಾತ್ರಿ ಜೈನಮುನಿ ಬಸದಿಯಿಂದ ನಾಪತ್ತೆಯಾಗಿದ್ದಾರೆ. ಎಂದಿನಂತೆ ಮೊನ್ನೆ ಬೆಳಗ್ಗೆ ಮುನಿಗಳಿಗೆ ಅಡುಗೆ ಮಾಡಲು ಬಂದ ಮಹಿಳೆಗೆ ಮೊದಲು ಮಹಾರಾಜರು ಬಸದಿಯಲ್ಲಿ ಇಲ್ಲದೇ ಇರೋದು ಗೊತ್ತಾಗಿದೆ. ತಕ್ಷಣವೇ ಭಕ್ತರು ಮುನಿಗಳನ್ನ ಸುತ್ತಲೂ ನಾಲ್ಕೈದು ಕಿಲೋಮೀಟರ್ ಹುಡುಕಾಡಿದ್ದಾರೆ. ಯಾವಾಗ ಮಹಾರಾಜರ ಯಾವುದೇ ಸುಳಿವು ಸಿಗದ ಹಿನ್ನೆಲೆ ಇಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಜೈನ ಬಸದಿಯ ಟ್ರಸ್ಟ್ ಸದಸ್ಯರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ