ಧಾರವಾಡ: ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್ದಲ್ಲಿ ಆಸ್ತಿ, ಮದ್ಯ ತೆರಿಗೆ ಹೆಚ್ಚಳ ಮಾಡಿದ್ದಾರೆ. ಶೇ 10ರಷ್ಟು ತೆರಿಗೆ ಹೆಚ್ಚಿಸಿದ್ದಾರೆ. ಮತ್ತೆ ಯಾವ ಯಾವ ತೆರಿಗೆ ಹೆಚ್ಚಳ ಮಾಡ್ತಾರೆ ನೋಡೋಣ ಎಂದು ರಾಜ್ಯದ ಸರ್ಕಾರದ ಬಜೆಟ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.
ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಒಟ್ಟಾರೆ ಯಾವುದೇ ಪ್ಲಾನಿಂಗ್ ಇಲ್ಲದ ಬಜೆಟ್ ಮಂಡನೆ ಆಗುತ್ತಿದೆ. ಬಜೆಟ್ ನಿಂದ ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಎದ್ದು ಕಾಣುತ್ತಿದೆ. ಪದೇ ಪದೆ ಭಾರತ ಸರ್ಕಾರದ ಮೇಲೆ ಮಂತ್ರಿಗಳು ಸಚಿವರು ಆರೋಪ ಮಾಡ್ತಿದ್ದಾರೆ. ಜುಲೈ 1ಕ್ಕೆ ನೀಡಿರುವ ಅಕ್ಕಿಯೂ ಕೇಂದ್ರ ಸರ್ಕಾರದ್ದು, ಕರ್ನಾಟಕ ಸೇರಿ 80 ಕೋಟಿ ಜನರಿಗೆ ಅಕ್ಕಿ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.