Breaking News

ಗುಂಡು ಹಾರಿಸಿಕೊಂಡು ಡಿಐಜಿ ವಿಜಯಕುಮಾರ್ ಆತ್ಮಹತ್ಯೆ

Spread the love

ಕೊಯಮತ್ತೂರು : ಕೊಯಮತ್ತೂರು ಕಾರ್ಗೋ ವಿಭಾಗದ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಕುಮಾರ್ (45) ಅವರು ಬಂಟ ರಸ್ತೆಯ ಪಾಂಥಯ ಸಲೈನಲ್ಲಿರುವ ತಮ್ಮ ಕ್ಯಾಂಪ್ ಕಚೇರಿಯಲ್ಲಿ ಶುಕ್ರವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

2009ರ ಐಪಿಎಸ್ ಬ್ಯಾಚ್‌ನವರಾಗಿದ್ದ ಇವರು, 2022 ಜನವರಿ 6ರಂದು ಚೆನ್ನೈನ ಅಣ್ಣಾನಗರ ಡೆಪ್ಯುಟಿ ಕಮಿಷನರ್‌ನಿಂದ ಕೊಯಮತ್ತೂರು ಡಿಐಜಿಯಾಗಿ ಬಡ್ತಿ ಪಡೆದಿದ್ದರು. ಕಾಂಚೀಪುರಂ, ಕಡಲೂರು, ನಾಗಪಟ್ಟಿಣಂ ಮತ್ತು ತಿರುವರೂರ್​ನಲ್ಲಿ ಡಿಎಸ್​ಪಿಯಾಗಿ ಕೆಲಸ ಮಾಡಿದ್ದಾರೆ.

ನಿನ್ನೆ ರಾತ್ರಿ ಜಿಲ್ಲಾಧಿಕಾರಿ ಸಂದೀಶ್ ಅವರ ಮಗುವಿನ ಹುಟ್ಟುಹಬ್ಬಕ್ಕೆ ವಿಜಯಕುಮಾರ್ ತೆರಳಿದ್ದರು. ಇಂದು ಬೆಳಗ್ಗೆ 6.50ಕ್ಕೆ ವಾಕಿಂಗ್ ಮುಗಿಸಿ ಪಂಥಿಯಾ ಸಲೈನಲ್ಲಿರುವ ಕ್ಯಾಂಪ್​ ಕಚೇರಿಗೆ ಬಂದಿದ್ದರು. ಬಳಿಕ, ತಮ್ಮ ಅಂಗರಕ್ಷಕ ರವಿ ಬಳಿ ಪಿಸ್ತೂಲ್ ತೆಗೆದುಕೊಂಡು ಕೋಣೆಗೆ ಹೋದವರು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ


Spread the love

About Laxminews 24x7

Check Also

ಕೈದಿಗಳಿಗೆ ರಾಜಾತಿಥ್ಯ ಸಿಎಂ, ಗೃಹ ಸಚಿವರು ರಾಜೀನಾಮೆ ನೀಡಲಿ: B.J.P.

Spread the love ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ವಿಶೇಷ ಆತಿಥ್ಯ ಖಂಡಿಸಿ ಇಂದು ಸಿಎಂ ಮನೆಗೆ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ