Breaking News

ನನಗೆ 82 ಅಥವಾ 92 ವರ್ಷಗಳೇ ಆಗಿರಲಿ ಏನೀಗ. ನಾನೇ ಎನ್​​ಸಿಪಿ ಅಧ್ಯಕ್ಷ: ಶರದ್ ಪವಾರ್

Spread the love

ನವದೆಹಲಿ: ನಾನೂ ಈಗಲೂ ಎನ್​​ಸಿಪಿಯ ಅಧ್ಯಕ್ಷ. ನನಗೆ 82 ಅಥವಾ 92 ವರ್ಷಗಳೇ ಆಗಿರಲಿ ಏನೀಗ. ನಾನು ಈಗಲೂ ಸಮರ್ಥನಾಗಿದ್ದೇನೆ ಎಂದು ಹೇಳುವ ಮೂಲಕ ಶರದ್​ ಪವಾರ್​, ತಮ್ಮ ಸಹೋದರನ ಮಗ ಅಜಿತ್​ ಪವಾರ್​ಗೆ ತಿರುಗೇಟು ನೀಡಿದ್ದಾರೆ.

ಪಕ್ಷ ಇಬ್ಭಾಗವಾಗಿದ್ದು, ತಮ್ಮದೇ ನಿಜವಾದ ಪಕ್ಷ ಎಂದು ಅಜಿತ್​ ಪವಾರ್​ ಹೇಳಿಕೊಳ್ಳುತ್ತಿರುವ ಬೆನ್ನಲೇ, ಶರದ್​ ಪವಾರ್ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿದರು. ಈ ಸಭೆಯ ಬಳಿಕ ಮಾತನಾಡಿದ ಪವಾರ್, ನಾನೇ ಈಗಲೂ ಪಕ್ಷದ ರಾಷ್ಟ್ರಾಧ್ಯಕ್ಷ ಎಂದು ಘೋಷಿಸಿದರು. ಮುಂದುವರೆದು ಮಾತನಾಡಿದ ಅವರು, ಅಜಿತ್ ಪವಾರ್ ಅವರನ್ನು ಬೆಂಬಲಿಸುವ ಬಹುಪಾಲು ಶಾಸಕರ ಹೂರಣ ಶೀಘ್ರವೇ ಹೊರಬರಲಿದೆ ಎಂದರು. ಇನ್ನು ಎನ್​ಸಿಪಿ ಸಭೆಯಲ್ಲಿ, ಎನ್‌ಡಿಎ ಜೊತೆ ಕೈಜೋಡಿಸಿರುವ ಪ್ರಫುಲ್ ಪಟೇಲ್, ಸುನೀಲ್ ತಟ್ಕರೆ ಮತ್ತು ಇತರ ಒಂಬತ್ತು ಮಂದಿಯನ್ನು ಉಚ್ಚಾಟಿಸುವ ನಿರ್ಧಾರವನ್ನು ಅನುಮೋದಿಸಲಾಯಿತು.

ಎನ್​ಸಿಪಿ ಕಾರ್ಯಕಾರಿ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳೇನು?: ಎನ್​ಸಿಪಿಯ ಈಸಭೆಯಲ್ಲಿ ಎಂಟು ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಪಕ್ಷದ ನಾಯಕ ಪಿ ಸಿ ಚಾಕೊ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಜಿತ್ ಪವಾರ್ ಅವರು ತಮಗೆ ಬಹುಮತ ಇದೆ ಎಂಬುದಾಗಿ ಹೇಳಿಕೊಂಡಿದ್ದು, ಆ ಬಗೆಗಿನ ಸತ್ಯ ಶೀಘ್ರದಲ್ಲೇ ಹೊರ ಬರಲಿದೆ ಎಂದು ಪವಾರ್​​​ ಹೇಳಿದ್ದಾರೆ 


Spread the love

About Laxminews 24x7

Check Also

ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ!

Spread the love ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ! ಸಚಿವ ಶರಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ