ಬೆಂಗಳೂರು : ಆಂಧ್ರಪ್ರದೇಶ ಹಾಗೂ ಒಡಿಶಾ ಸೇರಿ ವಿವಿಧ ರಾಜ್ಯಗಳಿಂದ ನಗರಕ್ಕೆ ತಂದು ಗಾಂಜಾ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮಹಿಳೆ ಸೇರಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿ 79 ಕೆ.ಜಿ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ರೈಲು ಹಾಗೂ ಬಸ್ ಮಾರ್ಗವಾಗಿ ನಗರದಲ್ಲಿ ಅವ್ಯವಾಹತವಾಗಿ ನಗರಕ್ಕೆ ತಂದು ಸಣ್ಣ ಪೊಟ್ಟಣಗಳಲ್ಲಿ ಇಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಮಧುಸ್ಮಿತಾ, ನರೇಶ್, ದಿಲ್ಮಾಜ್, ಸುಬ್ರತ್ ಪ್ರಧಾನ್, ರಾಜ್ ಮೋಹನ್ ಹಾಗೂ ಲಕ್ಷ್ಮೀಕಾಂತ್ ಸೇರಿ ಒಟ್ಟು 8 ಮಂದಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸತತ ಮೂರು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ 79 ಕೆಜಿ ಗಾಂಜಾ ಜಪ್ತಿ ಮಾಡಿದ್ದು, ಆಂಧ್ರ, ಒಡಿಶಾದಿಂದ ಬರುತ್ತಿದ್ದ ಗಾಂಜಾವನ್ನ ಅಬಕಾರಿ ಇಲಾಖೆಯ ನಗರದ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ವೀರಣ್ಣ ಬಾಗೆವಾಡಿ ನೇತೃತ್ವದ ತಂಡ ತಡೆದಿದೆ. ಅಬಕಾರಿ ಅಧಿಕಾರಿಗಳ ಕೈಗೆ ಲೇಡಿ ಪೆಡ್ಲರ್ ಲಾಕ್ ಆಗಿದ್ದು ಒಡಿಶಾದಿಂದ ಬರ್ತಿದ್ದ ಪೆಡ್ಲರ್ ಮದುಸ್ಮಿತಾ ಮತ್ತು ನರೇಶ್ ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇಬ್ಬರನ್ನ ಅರೆಸ್ಟ್ ಮಾಡಿ ಸುಮಾರು 18 ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ.